ಹುಬ್ಬಳ್ಳಿ ಕಲ್ಲು ತೂರಾಟ ಮಾಡಿದವರು ಅಮಾಯಕರಾ?

ಈ ಪ್ರಕರಣ ಸಂಬಂಧ 88 ಜನರನ್ನು ಅರೆಸ್ಟ್ ಮಾಡಲಾಗಿದೆ. ಅವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಕೆಲ ರಾಜಕಾರಣಿಗಳು ಅಮಾಯಕರನ್ನು ಅರೆಸ್ಟ್‌ ಮಾಡಿದ್ದಾರೆಂನಬ ಮಾತುಗಳನ್ನಾಡಿದ್ದಾರೆ. ಇನ್ನು ಗಲಭೆಗೆ ಸಂಬಂದಿಸಿದಂತೆ ಈಗಾಗಲೇ 9 ಎಫ್‌ಐಆರ್‌ ದಾಖಲಾಗಿದೆ. ಅನೇಕರ ವಿಚಾರಣೆಯೂ ನಡೆಯುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಏ.19): ಹುಬ್ಬಳ್ಳಿ ಒಂದು ಭಾಗ ಹೊತ್ತಿ ಉರಿದಿತ್ತು. ಈವರೆಗೂ ಈ ಪ್ರಕರಣ ಸಂಬಂಧ 88 ಜನರನ್ನು ಅರೆಸ್ಟ್ ಮಾಡಲಾಗಿದೆ. ಅವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಕೆಲ ರಾಜಕಾರಣಿಗಳು ಅಮಾಯಕರನ್ನು ಅರೆಸ್ಟ್‌ ಮಾಡಿದ್ದಾರೆಂನಬ ಮಾತುಗಳನ್ನಾಡಿದ್ದಾರೆ. ಇನ್ನು ಗಲಭೆಗೆ ಸಂಬಂದಿಸಿದಂತೆ ಈಗಾಗಲೇ 9 ಎಫ್‌ಐಆರ್‌ ದಾಖಲಾಗಿದೆ. ಅನೇಕರ ವಿಚಾರಣೆಯೂ ನಡೆಯುತ್ತಿದೆ. 

ಆದರೀಗ ಈ ಅಮಾಯಕರು ಎಂಬ ವಿಚಾರ ರಾಜಕೀಯ ಪಕ್ಷಗಳ ನಡುವೆ ವಾಗ್ದಾಳಿಗೆ ಕಾರಣವಾಗಿದೆ. ಅತ್ತ ಜೆಡಿಎಸ್‌ ನಾಯಕ ಎಚ್. ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿದ ಈ ಅಮಾಯಕ ಹೇಳಿಕೆ ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾದ್ರೆ ಕಲ್ಲು ತೂರಾಟ ನಡೆಸಿದವರು ಅಮಾಯಕರಾ? ಎಂಬ ಅನುಮಾನವೂ ಜೋರಾಗಿದೆ. 

Related Video