ಸಿಎಂ ಸ್ಥಾನಕ್ಕೆ ಶುರುವಾಯ್ತು ರೇಸ್, ಬಲವಾಗಿ ಕೇಳಿ ಬರ್ತಿದೆ 'ಮೂವರ' ಹೆಸರು
ನಾಯಕತ್ವ ಬದಲಾವಣೆ ನಡುವೆ ಸಿಎಂ ಸ್ಥಾನಕ್ಕೆ ಕೆಲವರ ಹೆಸರು ಕೇಳಿ ಬರುತ್ತಿದೆ. ಲಿಂಗಾಯತ ಕೋಟದಲ್ಲಿ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಸಂಸದರ ಹೆಸರಲ್ಲಿ ಪ್ರಹ್ಲಾದ್ ಜೋಷಿ, ಉದಾಸಿ ಕೇಳಿ ಬರುತ್ತಿದೆ.
ಬೆಂಗಳೂರು (ಜು. 19): ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳಾಗುತ್ತಿದೆ. ಒಂದು ಕಡೆ ನಾಯಕತ್ವ ಬದಲಾವಣೆ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಜುಲೈ 25 ಕ್ಕೆ ಸಿಎಂ, ತಮ್ಮ ಸಿಬ್ಬಂದಿಗಳಿಗೆ ಭೋಜನ ಕೂಟ ಏರ್ಪಡಿಸಿರುವುದು ಕುತೂಹಲಗಳಿಗೆ ಕಾರಣವಾಗಿದೆ.
ಜು. 26 ರಂದು ಯಡಿಯೂರಪ್ಪ ರಾಜೀನಾಮೆ ಘೋಷಣೆ ಸಾಧ್ಯತೆ.?
ಇದರ ನಡುವೆ ಸಿಎಂ ಸ್ಥಾನಕ್ಕೆ ಕೆಲವರ ಹೆಸರು ಕೇಳಿ ಬರುತ್ತಿದೆ. ಲಿಂಗಾಯತ ಕೋಟದಲ್ಲಿ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಸಂಸದರ ಹೆಸರಲ್ಲಿ ಪ್ರಹ್ಲಾದ್ ಜೋಷಿ, ಉದಾಸಿ, ಸಂಘಟನೆಯಲ್ಲಿ ತೊಡಗಿರುವ ಸಿ ಟಿ ರವಿ, ವಿಶ್ವೇಶ್ವರ್ ಹೆಗಡೆ ಕಾಗೇರಿ ಹೆಸರೂ ಕೂಡಾ ಬಲವಾಗಿ ಕೇಳಿ ಬರುತ್ತಿದೆ.