Belagavi:MES ಸಂಘಟನೆ ಬ್ಯಾನ್ ಮಾಡುವಂತೆ ಕರ್ನಾಟಕ ಗಡಿ ಹೋರಾಟ ಸಮಿತಿ ಆಗ್ರಹ

ಕುಂದಾನಗರಿಯಲ್ಲಿ (Belagavi) ಪದೇ ಪದೇ ಪುಂಡಾಟ ನಡೆಸುತ್ತಿರುವ ಎಂಇಎಸ್ (MES) ನಿಷೇಧಿಸುವಂತೆ ಕರ್ನಾಟಕ ಗಡಿ ಹೋರಾಟ ಸಮಿತಿ ಆಗ್ರಹಿಸಿದೆ. ಗಡಿ ಭಾಗದಲ್ಲಿ 3 ದಿನಗಳ ಕಾಲ ಪ್ರವಾಸವನ್ನೂ ಕೈಗೊಂಡಿದೆ. ಪ್ರೊ. ಬಿ ಕೆ ಆರ್ ರಾವ್ ಬೈಂದೂರ್ ಬೆಳಗಾವಿಗೆ ಭೇಟಿ ಕೊಟ್ಟರು. 

First Published Jan 15, 2022, 5:37 PM IST | Last Updated Jan 15, 2022, 6:16 PM IST

ಬೆಳಗಾವಿ (ಜ. 15): ಕುಂದಾನಗರಿಯಲ್ಲಿ (Belagavi) ಪದೇ ಪದೇ ಪುಂಡಾಟ ನಡೆಸುತ್ತಿರುವ ಎಂಇಎಸ್ (MES) ನಿಷೇಧಿಸುವಂತೆ ಕರ್ನಾಟಕ ಗಡಿ ಹೋರಾಟ ಸಮಿತಿ ಆಗ್ರಹಿಸಿದೆ.

Mekedatu Padayatre: ಮತ್ತೆ ಮುಂದುವರೆಸುವ ಬಗ್ಗೆ ಸುಳಿವು ಕೊಟ್ಟ ಡಿಕೆಶಿ

ಗಡಿ ಭಾಗದಲ್ಲಿ 3 ದಿನಗಳ ಕಾಲ ಪ್ರವಾಸವನ್ನೂ ಕೈಗೊಂಡಿದೆ. ಪ್ರೊ. ಬಿ ಕೆ ಆರ್ ರಾವ್ ಬೈಂದೂರ್ ಬೆಳಗಾವಿಗೆ ಭೇಟಿ ಕೊಟ್ಟರು. 'ಬೆಳಗಾವಿಯಲ್ಲಿ ಮೂಲಭೂತ ಸೌಕರ್ಯವಿಲ್ಲ, ರಸ್ತೆಗಳು ಅವ್ಯವಸ್ಥೆಯಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಕಾಣಿಸುತ್ತಿದೆ. ಎಂಇಎಸ್ ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿದೆ. ಎಂಇಎಸ್‌ನ್ನು ಬ್ಯಾನ್ ಮಾಡಬೇಕು. ಇದೇ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯವಾಗಬೇಕು' ಎಂದು ಒತ್ತಾಯಿಸಿದರು.