Asianet Suvarna News Asianet Suvarna News

ಬಸ್‌ನಲ್ಲಿ ಮಹಿಳೆಯರ ಜಡೆ ಜಗಳ, ತಲೆಚಚ್ಚಿಕೊಂಡ ಕಂಡಕ್ಟರ್‌!

ಶಕ್ತಿ ಯೋಜನೆಯಲ್ಲಿ ನಾರಿ ಮಣಿಗಳು ಬಸ್‌ನಲ್ಲಿಯೇ ಶಕ್ತಿ ಪ್ರದರ್ಶನ ತೋರುತ್ತಿರುವ ವಿಡಿಯೋ ವೈರಲ್‌ ಆಗುತ್ತಿವೆ. ತುಮಕೂರಿನಲ್ಲಿ ಬಸ್‌ನಲ್ಲಿಯೇ ಇಬ್ಬರು ಮಹಿಳೆಯರು ಜಡೆ ಹಿಡಿದು ಜಗಳವಾಡಿದ್ದಾರೆ.

ತುಮಕೂರು (ಜು.24): ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ಯೋಜನೆ ಶಕ್ತಿ ಬಂದಿದ್ದೇ ಬಂದಿದ್ದು, ಎಲ್ಲಾ ಕಡೆ ಹೊಡೆದಾಟದ ವಿಡಿಯೋಗಳು ವೈರಲ್‌ ಆಗಿವೆ. ಸೋಮವಾರ ತುಮಕೂರು ಬಸ್‌ ನಿಲ್ದಾಣದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಜಡೆ ಹಿಡಿದು ಕಾದಾಟಕ್ಕೆ ಇಳಿದಿದ್ದಾರೆ.

Bengaluru: ಟಿಕೆಟ್‌ ವಿಚಾರಕ್ಕೆ ಗಲಾಟೆ, ಪ್ರಯಾಣಿಕ-ಕಂಡಕ್ಟರ್‌ ನಡುವೆ ಬಸ್‌ನಲ್ಲೇ ಫೈಟ್‌!

ಇವರಿಬ್ಬರ ಜಗಳವನ್ನು ಬಿಡಿಸಲು ಹೋದ ಕಂಡಕ್ಟರ್‌ಗೀ ಡೋಂಟ್‌ಕೇರ್‌ ಎಂದ ಮಹಿಳೆಯರು, ಅವರಿಗೂ ಎರಡೇಟು ಬಿಗಿದಿದ್ದು ಕಂಡಿದೆ. ಜಗಳ ನಿಲ್ಲುವ ಲಕ್ಷಣ ಕಾಣದೇ ಇದ್ದಾಗ ತುಮಕೂರು ಟೌನ್‌ ಠಾಣೆಯಲ್ಲಿ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಇಬ್ಬರೂ ಮಹಿಳೆಯರನ್ನು ಬಿಟ್ಟು ಬಳಿಕ ಬಸ್‌ ಬೆಳಗಾವಿಯತ್ತ ಪ್ರಯಾಣ ಬೆಳೆಸಿದೆ.

Video Top Stories