Asianet Suvarna News Asianet Suvarna News

Bengaluru: ಟಿಕೆಟ್‌ ವಿಚಾರಕ್ಕೆ ಗಲಾಟೆ, ಪ್ರಯಾಣಿಕ-ಕಂಡಕ್ಟರ್‌ ನಡುವೆ ಬಸ್‌ನಲ್ಲೇ ಫೈಟ್‌!

ಶಕ್ತಿ ಯೋಜನೆಯ ಕಿರಿಕ್‌ಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ತುಮಕೂರಿನಲ್ಲಿ ಇಬ್ಬರು ಮಹಿಳೆಯರು ಸೋಮವಾರ ಗಲಾಟೆ ಮಾಡಿಕೊಂಡಿದ್ದರೆ, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಕಂಡಕ್ಟರ್‌ ಹಾಗೂ ಪುರುಷ ಪ್ರಯಾಣಿಕನ ನಡುವೆ ಬಸ್‌ನಲ್ಲಿ ಮಾರಾಮಾರಿ ನಡೆದಿದೆ.

ಬೆಂಗಳೂರು (ಜು.24): ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಸೇವೆಯ ಕಿರಿಕ್‌ ಇನ್ನೂ ಮುಕ್ತಾಯವಾದ ರೀತಿ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹತ್ತಿದ ಯುವಕ ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ, ಕಂಡಕ್ಟರ್ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ರಾಮಯ್ಯ ಆಸ್ಪತ್ರೆ ಬಳಿ ಬಸ್ ಸ್ಟಾಪ್ ಈ ಘಟನೆ ನಡೆದಿದೆ.

ಭಾನುವಾರ ಈ ಘಟನೆ ನಡೆದಿದೆ. ರಾಮಯ್ಯ ಆಸ್ಪತ್ರೆ ಬಳಿ ಬಸ್‌ ಹತ್ತಿದ್ದ ಯುವಕನಿಗೆ ಕಂಡಕ್ಟರ್‌ ಯಶವಂತಪುರಕ್ಕೆ ಟಿಕೆಟ್‌ ನೀಡಿದ್ದ. ಮಹಿಳೆಯರಿಗೆ ಚಾರ್ಜ್ ಇಲ್ಲ ನಮಗ್ಯಾಕೆ ಎಂದು ಈ ವೇಳೆ ಪ್ರಯಾಣಿಕ ತಗಾದೆ ತೆಗೆದಿದ್ದಾನೆ.

ಬಸ್‌ನಲ್ಲಿ ಮಹಿಳೆಯರ ಜಡೆ ಜಗಳ, ತಲೆಚಚ್ಚಿಕೊಂಡ ಕಂಡಕ್ಟರ್‌!

ಈ ವೇಳೆ ಟಿಕೆಟ್ ಹಣ ನೀಡುವಂತೆ ಕಂಡಕ್ಟರ್‌ ಪಟ್ಟು ಹಿಡಿದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಕಂಡಕ್ಟರ್ ಮತ್ತು ಪ್ರಯಾಣಿಕ. ಪ್ರಯಾಣಿಕ ಉತ್ತರ ಭಾರತದ ಮೂಲದವನಾಗಿದ್ದು, ನಂತರ ಇತರ ಪ್ರಯಾಣಿಕರು ತಿಳಿ ಹೇಳಿ ಕೆಳಗಿಳಿಸಿದ್ದಾರೆ. ಘಟನೆ ಕುರಿತು ಎಲ್ಲೂ ಪ್ರಕರಣ ದಾಖಲಾಗಿಲ್ಲ. ಘಟನೆಯನ್ನ ಸಹ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.