ದಕ್ಷಿಣ ಕನ್ನಡ: ಪ್ರಯಾಣಿಕನ ಒದ್ದು ರಸ್ತೆಗೆ ತಳ್ಳಿದ ಬಸ್ ನಿರ್ವಾಹಕ ಅಮಾನತು

ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರು ತಾಲೂಕಿ‌ನ ಈಶ್ವರಮಂಗಲದಲ್ಲಿ ಘಟನೆ ನಡೆದಿದ್ದು, ಇದೀಗ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿಯಿಂದ ಕಂಡಕ್ಟರ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 

First Published Sep 8, 2022, 12:02 PM IST | Last Updated Sep 8, 2022, 12:02 PM IST

ಮಂಗಳೂರು (ಸೆ.08): ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರು ತಾಲೂಕಿ‌ನ ಈಶ್ವರಮಂಗಲದಲ್ಲಿ ಘಟನೆ ನಡೆದಿದ್ದು, ಇದೀಗ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿಯಿಂದ ಕಂಡಕ್ಟರ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಪುತ್ತೂರು ಘಟಕದ ಕೆಎಸ್ಸಾರ್ಟಿಸಿ ನಿರ್ವಾಹಕ ಸುಖರಾಜ್ ರೈ ಅಮಾನತಾಗಿದ್ದು, ಸಾಮಾಜಿಕ ತಾಣಗಳಲ್ಲಿ ಕಂಡಕ್ಟರ್ ಅಮಾನವೀಯ ವರ್ತನೆ ವೈರಲ್ ಆಗಿತ್ತು. ಪ್ರಯಾಣಿಕ ಪಾನಮತ್ತನಂತಿದ್ದು, ಬಸ್ ಹತ್ತಿದಾಗಲೇ ಕಂಡಕ್ಟರ್ ತಡೆದಿದ್ದಾನೆ. ಪ್ರಯಾಣಿಕನ ಕೊಡೆ ಕಿತ್ತೆಸೆದು ಬಸ್ ಒಳಗಡೆಯೇ ಕೈಯಿಂದ ಹಲ್ಲೆ ಮಾಡಲಾಗಿದೆ. ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಕಂಡಕ್ಟರ್ ಒದ್ದಿದ್ದಾನೆ. ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಚಲಿಸಿತ್ತು. ಸಾಮಾಜಿಕ ತಾಣಗಳಲ್ಲಿಈ ವಿಡಿಯೋ ಫುಲ್ ವೈರಲ್ ಆಗಿದ್ದು, ನಿರ್ವಾಹಕನ ದುರ್ವರ್ತನೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

Video Top Stories