
KSDL ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ! 800 ಕೋಟಿ ರೂ. ಗೋಲ್ಮಾಲ್?
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಯಿಂದ ಕೆಎಸ್ಡಿಲ್ ಅಕ್ರಮ ಬೆಳಕಿಗೆ ಬಂದಿದೆ.
ಬೆಂಗಳೂರು (ಮಾ.4): ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಯಿಂದ ಕೆಎಸ್ಡಿಲ್ ಅಕ್ರಮ ಬೆಳಕಿಗೆ ಬಂದಿದೆ. ಕೆಎಸ್ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕೆಎಸ್ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಆರೋಪಿಸಿದ್ದಾರೆ. ಕೆಎಸ್ಡಿಎಲ್ ಕರ್ನಾಟಕ ಜನರ ಸ್ವತ್ತು. 107 ವರ್ಷದ ಹಳೆಯ ಸಂಸ್ಥೆಯಾಗಿದ್ದು, ಇಂತಹ ಕಾರ್ಖಾನೆಯಲ್ಲಿ ದೊಡ್ಡ ರೀತಿಯ ಹಗರಣ ನಡೆದಿದೆ ಎಂದಿದ್ದಾರೆ. 3 ತಿಂಗಳಲ್ಲಿ ಬರೋಬ್ಬರಿ 139 ಕೋಟಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಸೋಪು ಡಿಟರ್ಜೆಟ್ ಖರೀದಿಯಲ್ಲಿ ಅಕ್ರಮ ನಡೆದಿದೆ. ಈ ಮೂಲಕ ಬಗೆದಷ್ಟು ಸಂಸ್ಥೆಯ ಗೋಲ್ ಮಾಲ್ ಬಯಲಾಗುತ್ತಿದೆ.
Add Asianetnews Kannada as a Preferred Source
