ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವ ವ್ಯಕ್ತಿ ನೀನು, ಈಶ್ವರಪ್ಪ-ಜಮೀರ್ ಮಾತಿನ ಜಟಾಪಟಿ

ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಚರ್ಚೆ

ಸಿದ್ಧರಾಮಯ್ಯ ಅವರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಕೆಎಸ್ ಈಶ್ವರಪ್ಪ

ಜಮೀರ್-ಈಶ್ವರಪ್ಪ ನಡುವೆ ಏಕವಚನದಲ್ಲೇ ವಾಕ್ಸಮರ

First Published Mar 24, 2022, 8:34 PM IST | Last Updated Mar 24, 2022, 8:34 PM IST

ಬೆಂಗಳೂರು (ಮಾ.24): ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ (BJP Senior Leader) ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ(K S Eshwarappa) ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ನಡುವೆ ಏಕವಚನದಲ್ಲಿಯೇ ಮಾತಿನ ಸಮರ ನಡೆದಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಈಶ್ವರಪ್ಪ ಮಾತಿಗೆ ಅಡ್ಡ ಬಂದ ಜಮೀರ್ ಅಹ್ಮದ್ ಖಾನ್ ಅವರನ್ನು ಹಿರಿಯ ನಾಯಕ ತರಾಟೆಗೆ ತೆಗೆದುಕೊಂಡರು.

ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಕೆಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಈಶ್ವರಪ್ಪ ಸ್ಪಷನೆ ನೀಡುತ್ತಿದ್ದ ಹಂತದಲ್ಲಿ ಜಮೀರ್ ಅಹ್ಮದ್ ಖಾನ್ ಮಧ್ಯದಲ್ಲಿ ಅಡ್ಡಿಪಡಿಸಿದರು. ಈ ವೇಳೆ, ನಿನಗೇನು ಗೊತ್ತು. ಕುತ್ಕೊಳ್ಳಲೋ ಎಂದು ಈಶ್ವರಪ್ಪ ಹೇಳಿದ್ದಾರೆ. ಇಡೀ ರಾಜ್ಯಕ್ಕೆ ಬೆಂಕಿ ಹಚ್ಚೋನು ನೀನು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಂದಲ್ಲ, ನಾಳೆ ಮುಸ್ಲಿಮರು, ಕ್ರೈಸ್ತರು ಕೂಡ RSS ಆಗ್ತಾರೆ ಎಂದ ಈಶ್ವರಪ್ಪ!

ಈ ವೇಳೆ ಈಶ್ವರಪ್ಪ  ಹಾಗೂ ಜಮೀರ್ ಅಹ್ಮದ್ ನಡುವೆ ಮಾತಿನ ಜಟಾಪಟಿ ನಡೆದಿದೆ. ಕಾನೂನನು ಸುವ್ಯವಸ್ಥೆ ಬಗ್ಗೆ ಮಾತನಾಡೋ ಅಧಿಕಾರ ನಿನಗಿಲ್ಲ. ಕಾಂಗ್ರೆಸ್ ಪಕ್ಷಕ್ಕಲ್ಲ, ಇಡೀ ರಾಜ್ಯಕ್ಕೆ ಬೆಂಕಿ ಹಚ್ಚೋ ಮನುಷ್ಯ ನೀನು ಎಂದು ಈಶ್ವರಪ್ಪ ಹೇಳಿದರು. ಈಶ್ವರಪ್ಪ ಹೇಳಿದ ಮಾತಿಗೆ ಕಾಂಗ್ರೆಸ್ ಪಕ್ಷದವರು ಕಿಡಿಕಾರಿದರು.