Cabinet Reshuffle: ಮಂತ್ರಿಸ್ಥಾನ ತ್ಯಾಗದ ಸುಳಿವು ಕೊಟ್ರಾ ಈಶ್ವರಪ್ಪ.?

ಮಂತ್ರಿ ಸ್ಥಾನಕ್ಕಿಂತ ಸಂಘಟನೆ ಕೆಲಸ ಖುಷಿ ಕೊಡುತ್ತದೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ಹೊರಲು ನಾನು ಸಿದ್ದ, ಸಿಎಂ, ಹೈಕಮಾಂಡ್ (Highcommand) ಏನು ಹೇಳುತ್ತಾರೋ ಅದನ್ನು ಮಾಡಲು ರೆಡಿಯಿದ್ದೇನೆ' ಎಂದು ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. 

First Published Jan 24, 2022, 3:07 PM IST | Last Updated Jan 24, 2022, 3:07 PM IST

ಬೆಂಗಳೂರು (ಜ. 24): ಮಂತ್ರಿ ಸ್ಥಾನಕ್ಕಿಂತ ಸಂಘಟನೆ ಕೆಲಸ ಖುಷಿ ಕೊಡುತ್ತದೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿ ಹೊರಲು ನಾನು ಸಿದ್ದ, ಸಿಎಂ, ಹೈಕಮಾಂಡ್ (Highcommand) ಏನು ಹೇಳುತ್ತಾರೋ ಅದನ್ನು ಮಾಡಲು ರೆಡಿಯಿದ್ದೇನೆ' ಎಂದು ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. 

4 ಸ್ಥಾನಗಳು ಖಾಲಿಯಿದೆ. ಆ ಸ್ಥಾನಕ್ಕೆ ಯಾರು ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸುತ್ತದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಿಲ್‌ಕುಲ್ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. 

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ (Karnataka Cabinet Reshuffle) ಯಾವಾಗ ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಪಂಚರಾಜ್ಯ ಚುನಾವಣೆ ಬಳಿಕ ಕ್ಯಾಬಿನೆಟ್ ಸರ್ಕಸ್ ನಡೆಯಲಿದೆ. ಮಾರ್ಚ್ 2 ನೇ ವಾರದವರೆಗೂ ಸಂಪುಟ ಪುನಾರಚನೆ ಇಲ್ಲ. ಸಚಿವ ಸಂಪುಟ ಪುನಾರಚನೆ ಸಭೆಗಳನ್ನು ನಡೆಸಬೇಡಿ. ಬಜೆಟ್ ಅಧಿವೇಶನದ ಬಳಿಕ ಸಿಎಂ ನಿರ್ಧಾರ ಮಾಡುತ್ತಾರೆ' ಎಂದು ಸಚಿವರಿಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ.