ಪರಿಷ್ಕೃತ ಪಠ್ಯ ಪುಸ್ತಕವನ್ನು ವೇದಿಕೆಯಲ್ಲೇ ಹರಿದ ಡಿಕೆ ಶಿವಕುಮಾರ್‌!

ಪರಿಷ್ಕೃತ ಪಠ್ಯ ಪುಸ್ತಕವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವೇದಿಕೆಯಲ್ಲೇ ಹರಿದು ಹಾಕಿದ್ದು, "ಈ ಪಠ್ಯ ಸುಡುವುದು ನನಗೆ ಇಷ್ಟ ಆದರೆ, ಪುಸ್ತಕ ಸುಡಬಾರದು ಎನ್ನುವ ಕಾರಣಕ್ಕಾಗಿ ಇದನ್ನು ಹರಿದಿದ್ದೇನೆ ಎಂದು ಹೇಳಿದ್ದಾರೆ.
 

First Published Jun 18, 2022, 6:09 PM IST | Last Updated Jun 18, 2022, 6:09 PM IST

ಬೆಂಗಳೂರು (ಜೂನ್ 18): ಪರಿಷ್ಕೃತ ಪಠ್ಯಪುಸ್ತಕವನ್ನು ( revised text book ) ವೇದಿಕೆಯಲ್ಲಿಯೇ ಹರಿದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (Kpcc President DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪಠ್ಯಪುಸ್ತಕವನ್ನು ಸುಡುವುದು ನನಗೆ ಇಷ್ಟ. ಆದರೆ, ಪುಸ್ತಕ ಸುಡಬಾರದು ಎನ್ನುವ ಏಕೈಕ ಕಾರಣಕ್ಕಾಗಿ ಇದನ್ನು ಹರಿದಿದ್ದೇನೆ ಎಂದು ಹೇಳಿದ್ದಾರೆ.

ಕುವೆಂಪು ಅವರ ಪಠ್ಯವನ್ನು ಕೈಬಿಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರಕ್ಕೆ ಸಂಬಂಧಟ್ಟಂತೆ ನಡೆದ ಪ್ರತಿಭಟನೆಯಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಫ್ರೀಡಂ ಪಾರ್ಕ್‌ನಲ್ಲಿ (Freedom Park) ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಬಸವರಾಜ ಬೊಮ್ಮಾಯಿ (basavaraj bommai) ಸರ್ಕಾರವನ್ನು ಕಟು ಶಬ್ದಗಳಲ್ಲಿ ಟೀಕೆ ಮಾಡಿದರು.

ದೇಶದ ಅತೀ ಭ್ರಷ್ಟ ಸಚಿವ ಅಂದ್ರೆ ಅದು ಅಶ್ವತ್ಥನಾರಾಯಣ!

ಒಂದು ಚಳುವಳಿಯನ್ನು ಹೇಗೆ ಆರಂಭಿಸಬೇಕು, ಅದನ್ನು ಹೇಗೆ ಮುನ್ನಡೆಸಬೇಕು ಎನ್ನುವುದಕ್ಕೆ ಗೋಕಾಕ್ ಚಳುವಳಿ ಮಾರ್ಗದರ್ಶನ. ಅಂದು ಡಾ.ರಾಜ್ ಕುಮಾರ್ ಅವರು ಇದ್ದರು.
ಅದಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದರು. ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧದ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದರು. ಅವರೊಂದಿಗೆ ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ಹಂಸಲೇಖ, ವಿಆರ್ ಸುದರ್ಶನ್, ಸಾರಾ ಗೋವಿಂದ್, ಪ್ರವೀಣ್ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Video Top Stories