ದೇಶದ ಅತೀ ಭ್ರಷ್ಟ ಸಚಿವ ಅಂದ್ರೆ ಅದು ಅಶ್ವತ್ಥನಾರಾಯಣ!

ದೇಶದ ಅತೀ ಭ್ರಷ್ಟ ಸಚಿವ ಅಂದ್ರೆ ಅದು ಅಶ್ವತ್ಥನಾರಾಯಣ, ಪ್ರತಿ ಪೋಸ್ಟ್‌ಗೂ ದುಡ್ಡು ಸಂಗ್ರಹ ಮಾಡಿದವರು, ಪಿಎಸ್‌ಐ ಕೇಸ್‌ ಹೊರಬಂದ ಕ್ಷಣ ಸುಮ್ಮನಾಗಿದ್ದಾರೆ ಎಂದು ಅಶ್ವತ್ಥನಾರಾಯಣ್‌ರನ್ನು ಡಿಕೆ ಶಿವಕುಮಾರ್ ಮತ್ತೆ ತಿವಿದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್ 14): ಅಶ್ವತ್ಥನಾರಾಯಣ ಅರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPcc President dk shivakumar) ಕಿಡಿಕಾರಿದ್ದಾರೆ. ದೇಶದ ಅತೀ ಭ್ರಷ್ಟ ಸಚಿವ ಎಂದರೆ ಅದು ಅಶ್ವತ್ಥನಾರಾಯಣ (cn ashwath narayan), ಪ್ರತಿ ಪೋಸ್ಟ್ ಗೂ ಹಣ ಸಂಗ್ರಹ ಮಾಡಿದ ವ್ಯಕ್ತಿ ಆತ ಎಂದು ಹೇಳಿ ಟೀಕೆ ಮಾಡಿದ್ದಾರೆ.

ಪಿಎಸ್ಐ ಕೇಸ್ (PSI Case) ಹೊರಗಡೆ ಬಂದ ತಕ್ಷಣ ಅಶ್ವತ್ಥ ನಾರಾಯಣ ಸುಮ್ಮನಾಗಿದ್ದಾರೆ. ಅವರ ಎದುರೇ ನಿಂತು ಈ ಮಾತನ್ನಾಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಸಚಿವರ ಮಾತಿಗೆ ತಿರುಗೇಟು ನೀಡಿದ್ದಾರೆ. ಆತ ನಮ್ಮ ದೇಶದ ಅತ್ಯಂತ ಭ್ರಷ್ಟ ಶಿಕ್ಷಣ ಸಚಿವ ಎಂದು ಹೇಳಿದ್ದಾರೆ.

National Herald Case : ರಾಹುಲ್ ಗಾಂಧಿಗೆ ಬಂಧನ ಭೀತಿ?

ಕಾಂಗ್ರೆಸ್ ಪಕ್ಷವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case ) ಮಾಡಿದ ತಪ್ಪಿನಿಂದ ರಕ್ಷಣೆ ಪಡೆಯುವ ಸಲುವಾಗಿ ಇಡಿ ವಿರುದ್ಧ ಆಂದೋಲನ ಮಾಡುತ್ತಿದೆ. ಇದು ಬ್ಲ್ಯಾಕ್ ಮೇಲ್ ತಂತ್ರ ಇದನ್ನು ಖಂಡನೆ ಮಾಡುವುದಾಗಿ ರಾಜ್ಯದ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಹೇಳಿದ್ದರು.

Related Video