ಸರ್ಕಾರಕ್ಕೆ ಗ್ರಾಮಸ್ಥರ ಚಾಲೆಂಜ್! ಸಂಪರ್ಕ ಸೇತುವೆ ನಿರ್ಮಿಸಿ ಮಾದರಿ

2018 ರ ಮಹಾಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮ ನಲುಗಿ ಹೋಗಿತ್ತು.  ಭೂ ಕುಸಿತದಿಂದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದವು. ಎರಡು ವರ್ಷವಾದ್ರೂ ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದು,  ಗ್ರಾಮಸ್ಥರಿಂದ ಶ್ರಮದಾನ ಮೂಲಕ ಹೊಸ ಸೇತುವೆ ನಿರ್ಮಾಣವಾಗಿದೆ. 

First Published Jun 12, 2020, 5:24 PM IST | Last Updated Jul 10, 2020, 6:00 PM IST

ಬೆಂಗಳೂರು (ಜೂ. 12): 2018 ರ ಮಹಾಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮೊಣ್ಣಂಗೇರಿ ಗ್ರಾಮ ನಲುಗಿ ಹೋಗಿತ್ತು.  ಭೂ ಕುಸಿತದಿಂದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದವು. ಎರಡು ವರ್ಷವಾದ್ರೂ ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದ್ದು,  ಗ್ರಾಮಸ್ಥರಿಂದ ಶ್ರಮದಾನ ಮೂಲಕ ಹೊಸ ಸೇತುವೆ ನಿರ್ಮಾಣವಾಗಿದೆ. 

ಮೈಷುಗರ್ ವಿಚಾರದಲ್ಲಿ ಸಂಸದೆ ಸುಮಲತಾ ವಿರುದ್ಧ ತಿರುಗಿಬಿದ್ರ ಜನ?

ಕಲ್ಲು ಬಂಡೆ, ಮರದ ದಿಮ್ಮಿ, ಮುರಿದ ವಿದ್ಯುತ್ ಕಂಬ ಬಳಕೆ ಮಾಡಿ ಐದು ಕಡೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ನೂರಕ್ಕೂ ಹೆಚ್ಚು ಗ್ರಾಮಸ್ಥರ ಸಾಥ್  ನೀಡಿದ್ದಾರೆ. ಸೇತುವೆ ನಿರ್ಮಾಣಕ್ಕೆ ವಾಟ್ಸಾಪ್ ಗ್ರೂಪ್ ನೆರವಾಗಿದೆ.