ಕೊಡಗಿನಲ್ಲಿ ಮತ್ತೆ ಪ್ರವಾಹ; ಮತ್ತೆ ಮರುಕಳಿಸಲಿದೆಯಾ 2018ರ ಕರಾಳ ದಿನ..?

ಕರುನಾಡ ಕಾಶ್ಮೀರ ಅಂತ ಅನಿಸಿಕೊಂಡ ಕೊಡಗು, ಮಳೆಗಾಲ ಬಂದರೆ ಸಾಕು ಇಲ್ಲಿನ ನಕ್ಷೆಯೇ ಬದಲಾಗಿ ಹೋಗಿರುತ್ತೆ. ಸುರಿಯುತ್ತಿರುವ ಮಳೆಗೆ, ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ. ಅದು ಅಪಾಯದ ಮಟ್ಟ ಮೀರಿ. ಇದರಿಂದ ಜನರ ಜೀವನವೇ ಅಸ್ತವ್ಯಸ್ತವಾಗಿ ಹೋಗಿದೆ.  

Share this Video
  • FB
  • Linkdin
  • Whatsapp

ಕರುನಾಡ ಕಾಶ್ಮೀರ ಅಂತ ಅನಿಸಿಕೊಂಡ ಕೊಡಗು(Kodagu) ಮಳೆಗಾಲ (Rain) ಬಂದರೆ ಸಾಕು ಇಲ್ಲಿನ ನಕ್ಷೆಯೇ ಬದಲಾಗಿ ಹೋಗಿರುತ್ತೆ. ಸುರಿಯುತ್ತಿರುವ ಮಳೆಗೆ, ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ. ಅದು ಅಪಾಯದ ಮಟ್ಟ ಮೀರಿ. ಇದರಿಂದ ಜನರ ಜೀವನವೇ ಅಸ್ತವ್ಯಸ್ತವಾಗಿ ಹೋಗಿದೆ. ಹಲವು ಮನೆಗಳ ಮೇಲೆ ಮರ ಬಿದ್ದು ಮನೆಗಳಿಗೆ ಹಾನಿಯಾಗಿವೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಸುರಿದ ಧಾರಾಕಾರ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೂರನೇ ಬಾರಿ ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ. 

ಶಿಗ್ಗಾವಿ: ಜೀವ ಪಣಕ್ಕಿಟ್ಟು ಒದ್ದಾಡುತ್ತಿರುವ ರೈತರು; ದೃಶ್ಯ ನೋಡಿದ್ರೆ ಮೈ ಜುಮ್ಮೆನಿಸುತ್ತೆ!

ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮಡಿಕೇರಿ ತಾಲೂಕಿನ ಬಲಮುರಿ ಕೆಳ ಸೇತುವೆ ಮುಳುಗಡೆಗೊಂಡಿದ್ದು 2 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭೂಕುಸಿತದ ಭೀತಿಯಿರುವ ತೋರದ 14 ಕುಟುಂಬದ 34 ಜನರನ್ನು ತೋರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 

ಕೊಡಗಿನ ಎಂದೂ ಮರೆಯದ ಮಳೆಗಾಲ ಎಂದರೆ ಅದು 2018 ರದ್ದು, ಅಂದಿನ ನಳೆ ಕೊಡಗಿನ ಚಿತ್ರಣವನ್ನೇ ಬದಲಿಸಿತ್ತು. ಈಗಲೂ ಕೊಡಗಿನ ಜನರಿಗೆ ಆ ದಿನಗಳು ನೆನಪಾದರೆ ಸಾಕು, ಬೆಚ್ಚಿ ಬೀಳ್ತಾರೆ. ಈಗ ಮತ್ತೆ ಪ್ರಳಯಾಸುರ ಕೊಡಗಿಗೆ ರೀ ಎಂಟ್ರಿ ಆಗಿದ್ದಾನೆ. 

Related Video