ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ KMF

ನಂದಿನಿ ಚೀಸ್ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಬಂಪರ್ ಆಫರ್ ಘೋಷಿಸಿದೆ. 200 ಗ್ರಾಂ ನಂದಿನಿ ಪನ್ನೀರ್ ಖರೀದಿಸಿದ್ರೆ ಚೀಸ್ ಸ್ಪೈಸ್ ಉಚಿತವಾಗಿ ನೀಡಲು ಮುಂದಾಗಿದೆ. ಈ ಆಫರ್ 5 ದಿನಗಳವರೆಗೆ ಇರಲಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜು.09): ರಾಜ್ಯದಲ್ಲಿ ಮನೆ ಮಾತಾಗಿರುವ ಕೆಎಂಎಫ್ ಇದೀಗ ಮತ್ತಷ್ಟು ಜನಸ್ನೇಹಿಯಾಗುವ ನಿಟ್ಟಿನಲ್ಲಿ ಮಹತ್ತರವಾದ ಹೆಜ್ಜೆಯಿಟ್ಟಿದೆ. ಕೋವಿಡ್ 19 ಸಂಕಷ್ಟದಲ್ಲಿರುವ ಗ್ರಾಹಕರಿಗೆ ಕೆಎಂಎಫ್ ಬಂಪರ್ ಆಫರ್ ನೀಡಿದೆ.

ಹೌದು, ನಂದಿನಿ ಚೀಸ್ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಬಂಪರ್ ಆಫರ್ ಘೋಷಿಸಿದೆ. 200 ಗ್ರಾಂ ನಂದಿನಿ ಪನ್ನೀರ್ ಖರೀದಿಸಿದ್ರೆ ಚೀಸ್ ಸ್ಪೈಸ್ ಉಚಿತವಾಗಿ ನೀಡಲು ಮುಂದಾಗಿದೆ. ಈ ಆಫರ್ 5 ದಿನಗಳವರೆಗೆ ಇರಲಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಗಾಳಿಯಲ್ಲಿ ಕೊರೋನಾ..! ಮನೆಯಲ್ಲೇ ಇದ್ರೂ ಹರಡುತ್ತಾ ಸೋಂಕು..? ವಿಶ್ವಸಂಸ್ಥೆ ಹೇಳಿದ್ದಿಷ್ಟು..!

ನಂದಿನಿ ಪನ್ನೀರ್ ಹಾಗೂ ನಂದಿನಿ ಚೀಸ್ ಉತ್ಕೃಷ್ಟ ಗುಣಮಟ್ಟವನ್ನು ಹೊಂದಿದ್ದು, 85 ರುಪಾಯಿ ಮೌಲ್ಯದ ನಂದಿನಿ ಪನ್ನೀರ್ ಖರೀದಿಸಿದ್ರೆ ಅವರಿಗೆ 75 ರುಪಾಯಿ ಮೌಲ್ಯದ ಚೀಸ್‌ನ್ನು ನಾವು ಉಚಿತವಾಗಿ ನೀಡಲಿದ್ದೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video