ಸರ್ಪದೋಷ ಅಂದ್ರೆ ಇದೇನಾ?..ಬಾಲಕನನ್ನು ಬಿಟ್ಟು ಮತ್ಯಾರಿಗೂ ಕಾಣದ ನಾಗಪ್ಪ, 2 ತಿಂಗಳಲ್ಲಿ 9 ಬಾರಿ ಕಚ್ಚಿದ ಹಾವು!


ಇದು ಸರ್ಪದೋಷವೋ ಅಥವಾ ಹುಡುಗನ ದುರಾದೃಷ್ಟವೋ ಗೊತ್ತಿಲ್ಲ. ಕಲಬುರಗಿಯಲ್ಲಿ ಬಾಲಕನೊಬ್ಬನಿಗೆ ಎರಡು ತಿಂಗಳ ಅವಧಿಯಲ್ಲಿ 9 ಬಾರಿ ನಾಗರಹಾವು ಕಚ್ಚಿದೆ. 9 ಬಾರಿಯೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
 

Share this Video
  • FB
  • Linkdin
  • Whatsapp

ಕಲಬುರಗಿ (ಆ.29): ಹಾವಿನ ದ್ವೇಷನ ಹನ್ನೆರಡು ವರುಷ ಅನ್ನೋದು ಮಾತು. ತನ್ನ ಸೇಡು ತೀರೋವರೆಗೂ ನಾಗರಹಾವು ಬಿಡೋದಿಲ್ಲ. ಅದೇ ರೀತಿಯ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ. 

ಇಲ್ಲಿ ಈ ಬಾಲಕನ ಹೊರತಾಗಿ ಯಾರೊಬ್ಬರಿಗೂ ನಾಗರ ಹಾವು ಕಾಣೋದಿಲ್ಲ. 2 ತಿಂಗಳ ಅವಧಿಯಲ್ಲಿ 9 ಬಾರಿ ನಾಗರಹಾವು ಈತನಿಗೆ ಕಚ್ಚಿದೆ. ಹಾವಿನ ಕಾಟದಿಂದ ಬೇಸತ್ತಿರುವ ಬಾಲಕನ ಕುಟುಂಬ ಸರ್ಪದೋಷ ಇರಬಹುದು ಎನ್ನುವ ಕಾರಣಕ್ಕೆ ಮನೆಯನ್ನು ಕೂಡ ತೊರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಇಸ್ರೋ, ಚಂದ್ರಯಾನ-3ಗೆ ಸಿಕ್ಕಿತು ಮತ್ತೊಂದು ಹಿರಿಮೆ!

ಹಲಕರ್ಟಿ ಗ್ರಾಮದ ವಿಜಯ್‌ ಕುಮಾರ್ ಹಾಗೂ ಉಷಾ ದಂಪತಿಯ ಪುತ್ರ 15 ವರ್ಷದ ಪ್ರಜ್ವಲ್‌ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಜುಲೈ 3 ರಂದು ಮೊದಲ ಬಾರಿಗೆ ತನಗೆ ಹಾವು ಕಡಿದಿತ್ತು. ಅಲ್ಲಿಂದ ಇಲ್ಲಿಯವರೆಗೂ 9 ಬಾರಿ ಹಾವು ತನಗೆ ಕಚ್ಚಿದೆ ಎಂದು ಪ್ರಜ್ವಲ್‌ ಹೇಳಿಕೊಂಡಿದ್ದಾರೆ. ಇನ್ನು ಪ್ರಜ್ವಲ್‌ನ ಪೋಷಕರು ಹಾವಿನಿಂದ ಮುಕ್ತಿ ಕೊಡಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

Related Video