Asianet Suvarna News Asianet Suvarna News

ನಾಗಮಂಗಲ ಗಲಭೆ: ಕೇರಳದ ಇಬ್ಬರು ಆರೋಪಿಗಳ ಲಿಂಕ್ ಬಿಚ್ಚಿಟ್ಟ ಸಚಿವ ಚಲುವರಾಯಸ್ವಾಮಿ!

ನಾಗಮಂಗಲದಲ್ಲಿ ನಡೆದ ಕೋಮು ಗಲಭೆಯಲ್ಲಿ ಕೇರಳದ ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದ್ದು, ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ಅವರ ಸಂಪರ್ಕದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ಇಲ್ಲಿದೆ ನೋಡಿ..

First Published Sep 16, 2024, 4:49 PM IST | Last Updated Sep 16, 2024, 4:49 PM IST

ಮಂಡ್ಯ‌ (ಸೆ.16): ನಾಗಮಂಗಲ ಕೋಮು-ಗಲಭೆಯಲ್ಲಿ ಕೇರಳದ ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿರೋದು ಹತ್ತಾರು ಅನುಮಾನಗಳನ್ನು ಹುಟ್ಟು ಹಾಕಿದೆ. ನಿಷೇಧಿತ ಪಿಎಫ್ಐ ಸಂಘಟನೆಯ ಸಂಚಿನ ಶಂಕೆಯೂ ವ್ಯಕ್ತವಾಗಿದೆ. ನಾಗಮಂಗಲ ಗಲಭೆಯಲ್ಲಿ ಪಿಎಫ್ಐ ಲಿಂಕ್ ಇದ್ಯಾ ಅನ್ನೋ ಪ್ರಶ್ನೆಗೆ ಚಲುವರಾಯಸ್ವಾಮಿ ಕೊಟ್ಟ ಉತ್ತರವೇನು ಇಲ್ಲಿದೆ ನೋಡಿ. ಮಂಡ್ಯ ಜಿಲ್ಲೆಯಲ್ಲಿ ಶಾಂತವಾಗಿದ್ದ ನಾಗಮಂಗಲದಲ್ಲಿ ಕೋಮು ದಳ್ಳುರಿಯ ಕಿಚ್ಚು ಹೊತ್ತಿಸಿದವರು ಇದೇ ಇಬ್ಬರು ಕೇರಳದ ವ್ಯಕ್ತಿಗಳೇನಾ? ಇವರು ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯರೇ ಎಂಬ ಅನುಮಾನ ಕಂಡುಬರುತ್ತಿದೆ.

ನಾಗಮಂಗಲದಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು 154 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅದರಲ್ಲಿ 74 ಮಂದಿ ಅರೆಸ್ಟ್ ಆಗಿದ್ದಾರೆ. ಎ44 ಯೂಸುಫ್ ಮತ್ತು ಎ61 ನಾಸಿರ್ ಕೇರಳದವರು ಎಂಬುದನ್ನು ಎಫ್ಐಆರ್ ಕಾಪಿಯೇ ಹೇಳ್ತಾ ಇದೆ. ಇವರಿಗೆ ನಿಷೇಧಿತ ಪಿಎಫ್ಐ ಸಂಪರ್ಕ ಇದೆಯೇ ಅನ್ನೋದಷ್ಟೇ ಈಗಿರೋ ಕುತೂಹಲ. ಆ ರಹಸ್ಯವನ್ನು ಭೇದಿಸಲು ಖಾಕಿ ಪಡೆ ಹೆಜ್ಜೆ ಇಟ್ಟಿದೆ.  ಹೀಗಾಗಿ, ರಾಜ್ಯದ ಪೊಲೀಸರು ಈ ಇಬ್ಬರು ಮುಸ್ಲಿಂ ಯುವಕರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ಯದ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ.

Video Top Stories