19 ಜಿಲ್ಲೆ ಇಂದಿನಿಂದ ಅನ್‌ಲಾಕ್, ವಿಜಯಪುರ, ಶಿವಮೊಗ್ಗ, ಮಂಡ್ಯದ ಚಿತ್ರಣ
- ಸೋಂಕು ಕಡಿಮೆಯಾದ ಜಿಲ್ಲೆಗಳಲ್ಲಿ ಕಠಿಣ ಕೊರೋನಾ ನಿರ್ಬಂಧ ಸಡಿಲ
- ಮಧ್ಯಾಹ್ನ 2ರವರೆಗೆ ಖರೀದಿ ಅವಕಾಶ, ಕಾರ್ಖಾನೆ ತೆರೆಯಲು ಅನುಮತಿ
- ರಾತ್ರಿ 7ರಿಂದ ಕೊರೋನಾ ಕರ್ಫ್ಯೂ, 11 ಜಿಲ್ಲೆಗಳಲ್ಲಿ ನಿರ್ಬಂಧ ಯಥಾಸ್ಥಿತಿ
ಬೆಂಗಳೂರು (ಜೂ. 14): ಕೋವಿಡ್ ಸೋಂಕು ತೀವ್ರವಾಗಿರುವ 11 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ 19 ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದ ಅನ್‌ಲಾಕ್ ಜಾರಿಗೆ ಬಂದಿದೆ.
ಹಳೇ ಸ್ಟೈಲ್‌ಗೆ ಮರಳಿದ ಬೆಂಗ್ಳೂರು, ಲಾಲ್‌ಬಾಗ್‌ಗೆ ಸಾರ್ವಜನಿಕ ಅವಕಾಶ
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಸಿಗಲಿದೆ. ಆದರೆ, ಅನಗತ್ಯ ಓಡಾಟಕ್ಕೆ ಕಡಿವಾಣ ಮುಂದುವರಿಯಲಿದೆ. ಮದ್ಯದಂಗಡಿ ಮಧ್ಯಾಹ್ನದವರೆಗೆ ತೆರೆಯಲಿದ್ದು, ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೊಟೇಲ್‌ಗಳಲ್ಲಿ ತಿಂಡಿ, ಊಟದ ಪಾರ್ಸೆಲ್‌ಗೆ ಅನುಮತಿ ನೀಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಯಾವ ರೀತಿ ಚಿತ್ರಣ ಕಂಡು ಬಂದಿದೆ..? ಇಲ್ಲಿದೆ ವಿವರ