Asianet Suvarna News Asianet Suvarna News

ನಾಳೆ ಸಾರಿಗೆ ನೌಕರರ ಮುಷ್ಕರ; ಪ್ರಯಾಣಿಕರೇ ಗಮನಿಸಿ, ಪರ್ಯಾಯ ವ್ಯವಸ್ಥೆ ಹೀಗಿದೆ

ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬಸ್ ಸಂಚಾರ ವ್ಯವಸ್ಥೆ ಹೇಗಿರಲಿದೆ ಎಂದು ನೋಡುವುದಾದರೆ,  14 ಜಿಲ್ಲೆಗಳಿಗೆ  ಸಾರಿಗೆ ಬಂದ್ ಬಿಸಿ  ತಟ್ಟುವುದಿಲ್ಲ. ಹೆಚ್ಚುವರಿ 2000 ಖಾಸಗಿ ಬಸ್ ಗಳು ರಸ್ತೆಗಿಳಿಯಲಿವೆ. 

ಬೆಂಗಳೂರು (ಏ. 06): ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬಸ್ ಸಂಚಾರ ವ್ಯವಸ್ಥೆ ಹೇಗಿರಲಿದೆ ಎಂದು ನೋಡುವುದಾದರೆ,  14 ಜಿಲ್ಲೆಗಳಿಗೆ  ಸಾರಿಗೆ ಬಂದ್ ಬಿಸಿ  ತಟ್ಟುವುದಿಲ್ಲ. ಹೆಚ್ಚುವರಿ 2000 ಖಾಸಗಿ ಬಸ್ ಗಳು ರಸ್ತೆಗಿಳಿಯಲಿವೆ. ಹಂತ ಹಂತವಾಗಿ ಬೇಡಿಕೆಗನುಗುಣವಾಗಿ ಬಸ್‌ಗಳನ್ನು ರಸ್ತೆಗಿಳಿಸುತ್ತೇವೆ. ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಜಿಲ್ಲೆಗಳಲ್ಲಿ ಸಭೆ ಮಾಡಿ ಮನವಿ ಮಾಡಿದ್ದಾರೆ.

ಪ್ರಯಾಣಿಕರೇ ಗಮನಿಸಿ, ನಾಳೆಯಿಂದ ಸಾರಿಗೆ ಮುಷ್ಕರ, 4 ನಿಗಮಗಳ ಬಸ್ ಸಂಚಾರ ಬಂದ್

 ಚಿಕ್ಕಮಗಳೂರು,ಶಿವಮೊಗ್ಗ,ಉಡುಪಿ,ದಕ್ಷಿಣಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ, ಮಡಿಕೇರಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚುವರಿ ಖಾಸಗಿ ಬಸ್ ಸಂಚರಿಸಲಿವೆ. ಬಸ್ ದರ ಹೆಚ್ಚಳ ಇಲ್ಲ, ಈಗಿರೋ ದರದಲ್ಲೇ ಸೇವೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ರಾಜ್ಯ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಷನ್ ಉಪಾಧ್ಯಕ್ಷ  ಕೆ.ಕೆ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.