Asianet Suvarna News Asianet Suvarna News

ವಿಜಯೇಂದ್ರ VS ಸಿದ್ದರಾಮಯ್ಯ: ಮಹಾ ಸಂಗ್ರಾಮಕ್ಕೆ ಸಾಕ್ಷಿಯಾಗುತ್ತಾ ವರುಣಾ.?

Aug 6, 2021, 3:09 PM IST

ಬೆಂಗಳೂರು (ಆ. 06): ವರುಣ ವಿಧಾನಸಭಾ ಕ್ಷೇತ್ರ ಮಾಜಿ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕರ್ಮ ಭೂಮಿ. 2018 ರ ಚುನಾವಣೆ ವೇಳೆ ಸದ್ದು ಮಾಡಿದ್ದ ವರುಣಾ ಕ್ಷೇತ್ರ ಈಗ ಮತ್ತೆ ಸುದ್ಧಿಯಲ್ಲಿದೆ. ಇದಕ್ಕೆ ಕಾರಣ ಮಾಜಿ ಸಿಎಂ ಪುತ್ರ ವಿಜಯೇಂದ್ರ ಕೊಟ್ಟ ಹೇಳಿಕೆ. 

ಜಮೀರ್ ನಂಟು: ಇ.ಡಿ ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್!

'ಪಕ್ಷದ ಉಪಾಧ್ಯಕ್ಷನಾಗಿ ನಾನು ಇಡೀ ರಾಜ್ಯ ಸುತ್ತಬೇಕಿದೆ. ವಿಶೇಷವಾಗಿ ಹಳೆಯ ಮೂಸೂರು ಭಾಗದಲ್ಲಿ ಸುತ್ತಬೇಕು. ನನ್ನನ್ನು ಗುರುತಿಸಿರುವ ಕ್ಷೇತ್ರ ವರುಣಾ, ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ. ಆದರೆ ಟಿಕೆಟ್ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು' ಎಂದಿದ್ದಾರೆ.