
Karnataka Politics: ಸಚಿವ ಸ್ಥಾನ ಕಳೆದುಕೊಂಡಿದ್ದ ಜಾರಕಿಹೊಳಿಗೆ ರಿಲೀಫ್, ಮುಂದಿನ ನಡೆ ಏನು.?
ಅತ್ಯಾಚಾರ ಆರೋಪಕ್ಕೆ ತುತ್ತಾಗಿ ರಾಜಕೀಯದ ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರಿಗೆ ಹನ್ನೊಂದು ತಿಂಗಳ ಬಳಿಕ ಎಸ್‌ಐಟಿ ಬಿಗ್ ರಿಲೀಫ್ ನೀಡಿದೆ.
ಬೆಂಗಳೂರು (ಫೆ. 05): ಅತ್ಯಾಚಾರ ಆರೋಪಕ್ಕೆ ತುತ್ತಾಗಿ ರಾಜಕೀಯದ ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರಿಗೆ ಹನ್ನೊಂದು ತಿಂಗಳ ಬಳಿಕ ಎಸ್‌ಐಟಿ ಬಿಗ್ ರಿಲೀಫ್ ನೀಡಿದೆ. ಅತ್ಯಾಚಾರ ಆರೋಪದಿಂದ ಮಾಜಿ ಸಚಿವರಿಗೆ ಕ್ಲೀನ್‌ಚೀಟ್ ನೀಡಿ ಎಸ್‌ಐಟಿಯು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದೆ.
BDA Corruption: ಸರ್ಕಾರದ ಜಾಗ ಗುಳುಂ ಮಾಡೋಕೆ ಅಧಿಕಾರಿಗಳದ್ದೇ ಸಾಥ್!
ಅತ್ಯಾಚಾರ ಪ್ರಕರಣದ ದೂರುದಾರೆಯನ್ನು ಉದ್ಯೋಗದಾಸೆ ತೋರಿಸಿ ನಂಬಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನುವುದಕ್ಕೆ ತನಿಖೆ ವೇಳೆ ಪುರಾವೆ ಸಿಕ್ಕಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸುತ್ತೇವೆ ಎಂದು ಎಸ್‌ಐಟಿ ಹೇಳಿದೆ ಎನ್ನಲಾಗಿದೆ.