
ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿ ಪರೀಕ್ಷಾ ಕರ್ತವ್ಯದಿಂದ ಅಮಾನತು!
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡುವೆಯೂ ಹಿಜಾಬ್ ಸಂಘರ್ಷಕೋರ್ಟ್ ಆದೇಶ ಲೆಕ್ಕಕ್ಕಿಲದೇ ಪರೀಕ್ಷಾ ಕೋಣೆಯಲ್ಲಿ ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿಪರೀಕ್ಷಾ ವೃತ್ತಿಯಿಂದ ನೂರ್ ಫಾತೀಮಾ ಎನ್ನುವ ಶಿಕ್ಷಕಿಗೆ ರಿಲೀಫ್
ಬೆಂಗಳೂರು (ಮಾ. 28): ಹಿಜಾಬ್ (Hijab) ಕುರಿತಾಗಿ ಕರ್ನಾಟಕ ಹೈಕೋರ್ಟ್ (Karnataka High Court) ಸ್ಪಷ್ಟ ಶಬ್ದಗಳಲ್ಲಿ ತೀರ್ಪು ನೀಡಿದ್ದರೂ, ಅದನ್ನು ಲೆಕ್ಕಿಸದೇ ಆದೇಶವನ್ನು ಧಿಕ್ಕರಿಸುವ ಪ್ರಯತ್ನ ನಡೆದಿದೆ. ಸೋಮವಾರ ಆರಂಭವಾಗಿರುವ ಎಸ್ಸೆಸ್ಸೆಲ್ಸಿ (SSLC Exam) ಪರೀಕ್ಷೆಯ ವೇಳೆ, ಸೂಪರ್ ವೈಸರ್ ಕರ್ತವ್ಯಕ್ಕೆ ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿಯನ್ನು (supervisor ) ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನೂರ್ ಫಾತೀಮಾ (Noor Fathima) ಹೆಸರಿನ ಹೈಸ್ಕೂಲ್ ಶಿಕ್ಷಕಿ, ರಾಜಾಜಿನಗರ ಕೆಟಿಎಸ್ ವಿ ಶಾಲೆಗೆ ಪರೀಕ್ಷಾ ಕರ್ತವ್ಯಕ್ಕೆ ಹಿಜಾಬ್ ಧರಿಸಿ ಬಂದಿದ್ದರು. ಕೋರ್ಟ್ ಆದೇಶ ಉಲ್ಲಂಘನೆ ಆದ ಕಾರಣದಿಂದಾಗಿ ಫಾತಿಮಾ ಅವರನ್ನು ಪರೀಕ್ಷಾ ಕೆಲಸದಿಂದ ಮುಖ್ಯ ಅಧೀಕ್ಷಕರು ವಜಾಗೊಳಿಸಿದ್ದಾರೆ.
ಸೋಮವಾರ SSLC Exam, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅಗ್ನಿ ಪರೀಕ್ಷೆ!
ನೂರ್ ಫಾತೀಮಾ ಅವರಿಗೆ ಈ ಬಗ್ಗೆ ಸೂಚನೆಯನ್ನು ನೀಡಲಾಗಿತ್ತು. ಹಾಗಾಗಿಯೇ ಅವರನ್ನು ಈ ಕರ್ತವ್ಯಕ್ಕೆ ನಿಯುಕ್ತಿ ಮಾಡಲಾಗಿತ್ತು. ಆದರೆ, ಸೋಮವಾರ ಹಿಜಾಬ್ ಧರಿಸಿಯೇ ಬಂದ ಕಾರಣಕ್ಕಾಗಿ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ಅಧೀಕ್ಷಕಿ ಮಾಲಿನಿ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆಯೇ ನೂರ್ ಫಾತೀಮಾ ಅವರಿಗೆ ಈ ಮಾಹಿತಿ ನೀಡಲಾಗಿತ್ತು. ನೀವು ಹಿಜಾಬ್ ಹಾಕಿ ಬಂದಲ್ಲಿ ವಿದ್ಯಾರ್ಥಿನಿಯರ ಮೇಲೆ ಪ್ರಚೋದನೆ ಮಾಡಿದ ಹಾಗಾಗುತ್ತದೆ. ಆದ್ದರಿಂದ ಹಿಜಾಬ್ ಧರಿಸದೇ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಲಾಗಿತ್ತು. ಆದರೆ, ಇದಕ್ಕೆ ಬೆಲೆ ನೀಡದೇ ಹಿಜಾಬ್ ಧರಿಸಿ ನೂರ್ ಫಾತೀಮಾ ಕರ್ತವ್ಯಕ್ಕೆ ಬಂದಿದ್ದರು ಎನ್ನಲಾಗಿದೆ.