News Hour : ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್ ಸಂಘರ್ಷ

ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ಹಿಜಾಬ್ ವಿಚಾರ
ಹೈಕೋರ್ಟ್ ಮೆಟ್ಟಿಲೇರಿದ ಹಿಜಾಬ್ ಸಂಘರ್ಷ
ಅರಾಜಕತೆ ಸೃಷ್ಟಿ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 4): ಉಡುಪಿ (Udupi) ಜಿಲ್ಲೆಯಲ್ಲಿ ಆರಂಭವಾಗಿದ್ದ ಹಿಜಾಬ್ ಪ್ರಕರಣ ಇಂದು ಕರ್ನಾಟಕಕ್ಕೆ (Karnataka) ವ್ಯಾಪಿಸುವ ಲಕ್ಷಣ ತೋರಿದೆ. ಕುಂದಾಪುರ (Kundapur), ಮೈಸೂರಿನಲ್ಲೂ (Mysore) ಹಿಜಾಬ್ ಪ್ರಕರಣಗಳು ವರದಿ ಆಗಿರುವ ಬೆನ್ನಲ್ಲಿಯೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ ಎನ್ನುವ ವಿಚಾರ ಈಗ ಹಲವಾರು ಪ್ರತಿಕ್ರಿಯೆಗೆ ವೇದಿಕೆಯಾಗಿದೆ. ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ ( Education minister BC Nagesh), ಅರಾಜಕತೆ ಸೃಷ್ಟಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Hijab Controversy : ಕೋರ್ಟ್ ಆದೇಶ ಬರೋವರೆಗೂ ಸಮವಸ್ತ್ರ ಸಂಹಿತೆ ಪಾಲಿಸಿ!
ಉಡುಪಿ ಕಾಲೇಜಿನಲ್ಲಿ ಉಂಟಾಗಿರುವ ಹಿಜಾಬ್ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಿಜಾಬ್ ವಿವಾದ ದೊಡ್ಡ ಮಟ್ಟದ ಚರ್ಚೆಯಾಗುತ್ತಿರುವಾಗ ನ್ಯಾಯಾಲಯಗಳು ನೀಡಿರುವ ಹಲವು ತೀರ್ಮಾನಗಳನ್ನು ಚರ್ಚೆ ಮಾಡಲಾಗುತ್ತಿದೆ.

Related Video