World Heritage Site: ಯುನೆಸ್ಕೋಗೆ ಹೊಯ್ಸಳ ದೇಗುಲಗಳ ಪಟ್ಟಿ ರವಾನಿಸಿದ ಕೇಂದ್ರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಇಂದು 2022-23 ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದರು. ಈ ಬಜೆಟನ್ನು ಆಡಳಿತಾರೂಢ ಬಿಜೆಪಿ ಸ್ವಾಗತಿಸಿದರೆ, ವಿಪಕ್ಷಗಳು ನೀರಸ ಬಜೆಟ್, ಶೂನ್ಯ ಬಜೆಟ್ ಎಂದು ವಾಗ್ದಾಳಿ ನಡೆಸಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 01): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಇಂದು 2022-23 ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದರು. ಈ ಬಜೆಟನ್ನು ಆಡಳಿತಾರೂಢ ಬಿಜೆಪಿ ಸ್ವಾಗತಿಸಿದರೆ, ವಿಪಕ್ಷಗಳು ನೀರಸ ಬಜೆಟ್, ಶೂನ್ಯ ಬಜೆಟ್ ಎಂದು ವಾಗ್ದಾಳಿ ನಡೆಸಿವೆ. ಇನ್ನು ರಾಜ್ಯ ರಾಜಕೀಯದಲ್ಲಿ ಏನೆಲ್ಲಾ ಅಪ್‌ಡೇಟ್ಸ್‌ಗಳಿವೆ.? ಏನೆಲ್ಲಾ ಹೊಸ ವಿಚಾರಗಳಿವೆ ಎಂದು ನೋಡುವುದಾದರೆ, 2022-23ನೇ ಸಾಲಿನ ವಿಶ್ವ ಪಾರಂಪ​ರಿಕ ಪಟ್ಟಿಗೆ ಸೇರ್ಪ​ಡೆ​ಗಾಗಿ ಭಾರತ ಸರ್ಕಾ​ರ, 12-13ನೇ ಶತ​ಮಾ​ನ​ದಲ್ಲಿ ಹೊಯ್ಸಳ ರಾಜ​ವಂಶ​ಸ್ಥ​ರಿಂದ ನಿರ್ಮಾ​ಣ​ವಾದ ಕರ್ನಾ​ಟ​ಕದ ಬೇಲೂರು, ಹಳೇ​ಬೀಡು ಮತ್ತು ಸೋಮ​ನಾ​ಥ​ಪುರ ದೇವ​ಸ್ಥಾ​ನ​ಗ​ಳನ್ನು ನಾಮ​ನಿ​ರ್ದೇ​ಶ​ನ​ಗೊ​ಳಿ​ಸಿದೆ.

ದೇಶದಲ್ಲಿ ಕೊರೋನಾ ವೈರಸ್ಸಿನ 3ನೇ ಅಲೆ ಇನ್ನೂ ಅಂತ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪಾದಯಾತ್ರೆಗಳು, ವಾಹನಗಳ ರಾರ‍ಯಲಿಗಳು ಸೇರಿದಂತೆ ಇನ್ನಿತರ ಮೆರವಣಿಗೆಗಳ ಮೇಲಿನ ನಿಷೇಧವನ್ನು ಫೆ.11 ರವರೆಗೆ ವಿಸ್ತರಣೆ ಮಾಡಿದೆ.

Related Video