ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಕಳವಳ

ಕರ್ನಾಟಕದ ಸದ್ಯದ ಸ್ಥಿತಿ ಆತಂಕ ಮೂಡಿಸುತ್ತಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಲಸಿಕೆ ಒಂದೇ ಮಾರ್ಗ. ರಾಜ್ಯದಲ್ಲಿ 65 ಲಕ್ಷ ಜನರಿಗೆ 2 ನೇ ಡೋಸ್ ಸಿಕ್ಕಿಲ್ಲ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

First Published May 11, 2021, 3:35 PM IST | Last Updated May 11, 2021, 4:08 PM IST

ಬೆಂಗಳೂರು (ಮೇ. 11): ಕರ್ನಾಟಕದ ಸದ್ಯದ ಸ್ಥಿತಿ ಆತಂಕ ಮೂಡಿಸುತ್ತಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಲಸಿಕೆ ಒಂದೇ ಮಾರ್ಗ. ರಾಜ್ಯದಲ್ಲಿ 65 ಲಕ್ಷ ಜನರಿಗೆ 2 ನೇ ಡೋಸ್ ಸಿಕ್ಕಿಲ್ಲ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

'ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಿಕ್ಕಿಲ್ಲ. 18- 45 ವರ್ಷದೊಳಗಿನವರಿಗೆ ಇನ್ನೂ ಲಸಿಕೆ ಸಿಗುತ್ತಿಲ್ಲ. ಎಲ್ಲರಿಗೂ ಲಸಿಕೆ ಸಿಗುವಂತೆ ಕ್ರಮ ಕೈಗೊಳ್ಳದಿದ್ರೆ ಲಸಿಕಾ ಕಾರ್ಯಕ್ರಮವೇ ವಿಫಲವಾಗುತ್ತದೆ' ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. 

ಕೊರೊನಾ ಸಂಕಷ್ಟ: ವಿದೇಶಗಳು ಭಾರತದ ನೆರವಿಗೆ ಧಾವಿಸುತ್ತಿರುವುದೇಕೆ.?