Asianet Suvarna News Asianet Suvarna News

ಗೇಮ್‌ ಪ್ರಿಯರೇ ಗಮನಿಸಿ, ಆನ್‌ಲೈನ್‌ ಗೇಮ್‌ಗೂ ಬೀಳಲಿದೆ ಬ್ರೇಕ್?

Nov 21, 2020, 2:55 PM IST

ಬೆಂಗಳೂರು (ನ. 21): ಆನ್‌ಲೈನ್ ಗೇಮ್ ಹಾವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಆನ್‌ಲೈನ್‌ ಗೇಮ್‌ಗಳಿಂದ ಯುವ ಸಮೂಹ ಹಾಳಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ಧಾರೆ. 

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಸ್ಲಿಂ ಮುಖಂಡರಿಂದ ಅಭಿಯಾನ

ಈಗಿನ ಯುವಜನತೆ ಆನ್‌ಲೈನ್ ಗೇಮ್‌ನ ದಾಸರಾಗುತ್ತಿದ್ದಾರೆ. ಅವರ ಭವಿಷ್ಯ, ಶಿಕ್ಷಣದ ಮೇಲೆ ಇದು ಪ್ರಭಾವ ಬೀರುತ್ತಿದೆ. ಬೆಟ್ಟಿಂಗ್ ದಂಧೆಗಿಳಿಯುತ್ತಿದ್ದಾರೆ. ಇದನ್ನೆಲ್ಲಾ ನಿಯಂತ್ರಿಸಬೇಕೆಂದರೆ ಆನ್‌ಲೈನ್‌ ಗೇಮ್‌ಗಳನ್ನು ಬ್ಯಾನ್ ಮಾಡಬೇಕಾಗುತ್ತದೆ' ಎಂದು ಬೊಮ್ಮಾಯಿ ಹೇಳಿದ್ದಾರೆ.