IAS vs IPS ಖಡಕ್ ಅಧಿಕಾರಿಗಳಿಂದ ಗುರುತಿಸಿಕೊಂಡಿರುವ ಕರ್ನಾಟಕದ ಮಾನ ಹರಾಜು

ರೋಹಿಣಿ ಹಾಗೂ ರೂಪ ಬೀದಿ ಜಗಳ ವಿಧಾನಸೌಧಕ್ಕೆ ಎಂಟ್ರಿ, ಡಿ.27 ರಂದೇ ನಡೆದಿತ್ತಾ ರೋಹಿಣಿ ಸಿಂಧೂರಿ ಜೊತೆ ಸಂಧನಾ, ಶೀಘ್ರ ಗುಣಮುಖರಾಗಿ ಎಂದು ಡಿ ರೂಪಾಗೆ ತಿರುಗೇಟು ನೀಡಿದ ರೋಹಿಣಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಖಡಕ್ ಅಧಿಕಾರಿಗಳಿಂದ ಗುರುತಿಸಿಕೊಂಡಿರುವ ಕರ್ನಾಟಕ ಇದೀಗ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ಬೀದಿ ಜಗಳಗಳಿಂದ ತೀವ್ರ ಮುಖಭಂಗ ಅನುಭವಿಸಿದೆ. IPS ಡಿ ರೂಪಾ ಹಾಗೂ IAS ರೋಹಿಣಿ ಸಿಂಧೂರಿ ನಡುವಿನ ರಂಪಾಟ, ಆರೋಪ ಪ್ರತ್ಯಾರೋಪ ಯಾವ ರಾಜಕಾರಣಿಗಳಿಗೂ ಕಡಿಮೆ ಇಲ್ಲ. ಫೇಸ್‌ಬುಕ್, ಮಾಧ್ಯಮದ ಮುಂದೆ ನಡೆಯುತ್ತಿದ್ದ ಹಗ್ಗಜಗ್ಗಾಟ ಇದೀಗ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದೆ. ರಾಜ್ಯದಲ್ಲಿ ನಡೆಯುತ್ತಿರುವ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ನಡುವಿನ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ.ಇದೀಗ ರೋಹಿಣಿ ಸಿಂಧೂರಿ ಹಾಗೂ ಸಿಂಧೂರಿ ಪತಿ ಇಬ್ಬರು ಡಿ ರೂಪಾ ವಿರುದ್ದ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿ ರೂಪಾ ಕೂಡ ದೂರು ದಾಖಲಿಸಿದ್ದಾರೆ. ಇವರಿಬ್ಬರ ನಡುವಿನ ಜಗಳ ಈಗ ಶುರುವಾಗಿದ್ದಲ್ಲ. ಇದರ ಹಿಂದಿದೆ ಹಲವು ಕಾರಣ.

Related Video