Asianet Suvarna News Asianet Suvarna News

News Hour: ಸುಪ್ರೀಂಕೋರ್ಟ್​ ಕಟಕಟೆಯಲ್ಲಿ ಬರ ಪರಿಹಾರ ಫೈಟ್!


ಸುಪ್ರೀಂಕೋರ್ಟ್​ ಕಟಕಟೆಯಲ್ಲಿ ಬರ ಪರಿಹಾರ ಫೈಟ್ ಶುರುವಾಗಿದೆ. ಕೇಂದ್ರದ ವಿರುದ್ಧ ಕರ್ನಾಟಕ ಸರ್ಕಾರಕ್ಕೆ ಆರಂಭಿಕ ಜಯ ಸಿಕ್ಕಿದೆ. 2 ವಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ದ್ವಿಸದಸ್ಯ ಪೀಠ ಚಾಟಿ ಬೀಸಿದೆ.
 

ಬೆಂಗಳೂರು (ಏ.8): ಸುಪ್ರೀಂಕೋರ್ಟ್​ನಲ್ಲಿ ಬರ ಪರಿಹಾರಕ್ಕಾಗಿ ಕರ್ನಾಟಕ ಫೈಟ್‌ಗೆ ಆರಂಭಿಕ ಜಯ ಸಿಕ್ಕಿದೆ. ಬರ ಪರಿಹಾರ ಗೊಂದಲ ಹರಿಸಿಕೊಳ್ಳಲು 2 ವಾರ ಡೆಡ್​ಲೈನ್ಅನ್ನು ಕೇಂದ್ರ ಸರ್ಕಾರದ ಪರ ವಕೀಲರು ಕೇಳಿದ್ದಾರೆ.

ಎರಡು ವಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಸುಪ್ರೀಂ ಚಾಟಿ ಬೀಸಿದೆ. ನೋಟಿಸ್​ ನೀಡಬೇಡಿ.. 2 ವಾರದಲ್ಲಿ ಸಮಸ್ಯೆ ಬಗೆಹರಿಸ್ತೀವಿ. ಸುಪ್ರೀಂಕೋರ್ಟ್ ಎದುರು ಸಾಲಿಸಿಟರ್ ಜನರಲ್​ ವಾದ ಮಂಡಿಸಿದ್ದಾರೆ. ಎಲ್ಲ ವಿಚಾರಗಳಿಗೂ ರಾಜ್ಯ ಸುಪ್ರೀಂಕೋರ್ಟ್​ಗೆ ಬರಬೇಕಾ? ಅಲ್ಲದೇ ಈ ಮಾದರಿ ಅರ್ಜಿ ಹೊತ್ತು ಹಲವು ರಾಜ್ಯ ಬರುತ್ತಿವೆ. ಇಬ್ಬರ ಸ್ಪರ್ಧೆ ಬೇಡ.. 2 ವಾರದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕರ್ನಾಟಕ ಬರ ಪರಿಹಾರ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ನ್ಯಾ.ಬಿಆರ್ ಗವಾಯಿ, ಸಂದೀಪ್ ಮೆಹ್ತಾ ಪೀಠದಲ್ಲಿ ವಿಚಾರಣೆ ನಡೆದಿದೆ. ಕರ್ನಾಟಕ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ವಾದ ನಡೆಸಿದ್ದಾರೆ.

Video Top Stories