ರಾಜ್ಯ ಸರ್ಕಾರದ ಕೈ ಸೇರಿದ ತಜ್ಞರ ವರದಿ, ಜೂ. 07 ರ ಬಳಿಕ ಲಾಕ್‌ಡೌನ್ ವಿಸ್ತರಣೆ..?
ಲಾಕ್‌ಡೌನ್ ಬಗ್ಗೆ ರಾಜ್ಯ ಸರ್ಕಾರದ ಕೈ ಸೇರಿದೆ ತಜ್ಞರ ವರದಿ. ಜೂನ್ 7 ರ ಬಳಿಕವೂ ಲಾಕ್‌ಡೌನ್ ಮುಂದುವರೆಸಿ, ಒಂದೆರಡು ವಾರ ಲಾಕ್‌ಡೌನ್ ಮುಂದುವರೆಸಿ ಎಂಬ ಸಲಹೆಯನ್ನು ತಜ್ಞರು ಕೊಟ್ಟಿದ್ದಾರೆ.
ಬೆಂಗಳೂರು (ಮೇ. 31): ಲಾಕ್‌ಡೌನ್ ಬಗ್ಗೆ ರಾಜ್ಯ ಸರ್ಕಾರದ ಕೈ ಸೇರಿದೆ ತಜ್ಞರ ವರದಿ. ಜೂನ್ 7 ರ ಬಳಿಕವೂ ಲಾಕ್‌ಡೌನ್ ಮುಂದುವರೆಸಿ, ಒಂದೆರಡು ವಾರ ಲಾಕ್‌ಡೌನ್ ಮುಂದುವರೆಸಿ ಎಂಬ ಸಲಹೆಯನ್ನು ತಜ್ಞರು ಕೊಟ್ಟಿದ್ದಾರೆ.
ಲಾಕ್‌ಡೌನ್ ಸಂಕಷ್ಟ: NBF ವತಿಯಿಂದ 600 ಕುಟುಂಬಗಳಿಗೆ ಆಹಾರ, ಮೆಡಿಕಲ್ ಕಿಟ್ ವಿತರಣೆ
ಒಮ್ಮಿಂದೊಮ್ಮೆಲೆ ಅನ್‌ಲಾಕ್ ಮಾಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಪ್ರತಿವಾರವೂ ತಜ್ಞರ ವರದಿ ಆಧರಿಸಿ ಅನ್‌ಲಾಕ್ ಮಾಡಬೇಕು. ನಗರ ಭಾಗದಲ್ಲಿ ಕಂಟ್ರೋಲ್‌ಗೆ ಬಂದರೂ ಗ್ರಾಮೀಣ ಭಾಗದಲ್ಲಿ ಹತೋಟಿಗೆ ಬಂದಿಲ್ಲ. ಹಾಗಾಗಿ ಏಕಾಏಕಿ ಅನ್‌ಲಾಕ್ ಮಾಡುವುದು ಸರಿಯಲ್ಲ' ಎಂದಿದ್ದಾರೆ. ಈ ವರದಿಯನ್ನು ಆಧರಿಸಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.