Asianet Suvarna News Asianet Suvarna News

News Hour: ಚಾಮುಂಡಿ ತಾಯಿಗೆ ಮೊದಲ ಗೃಹಲಕ್ಷ್ಮೀ ಹಣ ನೀಡಿದ ಸರ್ಕಾರ!


ರಾಜ್ಯ ಸರ್ಕಾರ ಬುಧವಾರ ಅಧಿಕೃತವಾಗಿ ತನ್ನ ನಾಲ್ಕನೇ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀಗೆ ಚಾಲನೆ ನೀಡಿದೆ. ಅದಕ್ಕೂ ಮುನ್ನ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಅಲ್ಲಿ ಕಾಣಿಕೆಯಾಗಿ 2 ಸಾವಿರ ರೂಪಾಯಿಯನ್ನು ನೀಡಿತು.
 

ಬೆಂಗಳೂರು (ಆ.29): ಸಿಎಂ ಸಿದ್ದರಾಮಯ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ಮೈಸೂರಿನಲ್ಲಿ ಚಾಲನೆ ಸಿಗಲಿದೆ. ಅದಕ್ಕೂ ಮುನ್ನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಈ ವೇಳೆ ಗೃಹಲಕ್ಷ್ಮೀ ಯೋಜನೆಯ ಮೊದಲ 2 ಸಾವಿರ ರೂಪಾಯಿಯನ್ನು ಕಾಣಿಕೆಯಾಗಿ ಹಾಕಿದರು.

ಆಗಸ್ಟ್‌ 27ಕ್ಕೆ ಸರ್ಕಾರ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಒಂದೇ ಕಾರ್‌ನಲ್ಲಿ ಬಂದು ಪೂಜೆ ಸಲ್ಲಿಸಿದ್ದಾರೆ. ಒಟ್ಟಾಗಿ ಪೂಜೆ ಸಲ್ಲಿಸಿ ನಾಯಕರು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ.

ಸರ್ಪದೋಷ ಅಂದ್ರೆ ಇದೇನಾ?..ಬಾಲಕನನ್ನು ಬಿಟ್ಟು ಮತ್ಯಾರಿಗೂ ಕಾಣದ ನಾಗಪ್ಪ, 2 ತಿಂಗಳಲ್ಲಿ 9 ಬಾರಿ ಕಚ್ಚಿದ ಹಾವು!

ಮೇ 9ರಂದು ರಾಜ್ಯದಲ್ಲಿ ಕಾಂಗ್ರಸ್‌ ಸರ್ಕಾರ ಬರಲಿ ಎಂದು ಗ್ಯಾರಂಟಿ ಪತ್ರವಿಟ್ಟು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹರಕೆ ಹೊತ್ತಿದ್ದರು.ಮಂಗಳವಾರ ಒಟ್ಟಾಗಿ ಆಗಮಿಸಿ ಹರಕೆ ತೀರಿಸಿದ್ದಾರೆ. ಮೈಸೂರು ತಾಯಿ ಚಾಮುಂಡೇಶ್ವರಿಗೆ ಹಸಿರು, ಕೆಂಪು ಸೀರೆ, ಕನಕಾಂಬರ,ಮಲ್ಲಿಗೆ,ಗುಲಾಬಿ ಹೂವಿನ ಹಾರ, ಫಲ ಸಮರ್ಪಣೆ ಮಾಡಿದ್ದಾರೆ.

Video Top Stories