ಸಚಿವ ಸಂಪುಟ ಪರಿಷ್ಕರಣೆಗೆ 'ತ್ರಿ' ಸೂತ್ರ ಸಿದ್ಧಪಡಿಸಿದ ಹೈಕಮಾಂಡ್; ಯಾರಿಗೆ ಕೋಕ್, ಯಾರಾರಿಗೆ ಮಂತ್ರಿಗಿರಿ ಕಿಕ್!

2025ರ ಆರಂಭದಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಸುಚನೆಗಳು ಕಾಣಿಸಿಕೊಳ್ಳುತ್ತಿವೆ. ಹೈಕಮಾಂಡ್ ಮಂತ್ರಿಗಳ ಕಾರ್ಯವೈಖರಿಯ ವರದಿ ಕೇಳಿದ್ದು, ಸಚಿವರು ಮತ್ತು ಆಕಾಂಕ್ಷಿ ಶಾಸಕರಲ್ಲಿ ಚರ್ಚೆಗೆ ಕಾರಣವಾಗಿದೆ. ಹೊಸ ಮಂತ್ರಿಗಳ ಆಯ್ಕೆಗೆ ತ್ರಿಸೂತ್ರ ರೂಪಿಸಲಾಗುತ್ತಿದೆ.

First Published Jan 3, 2025, 1:35 PM IST | Last Updated Jan 3, 2025, 1:35 PM IST

2025ರ ವರ್ಷಾರಂಭದಲ್ಲಿಯೇ ಕೈ ಕೋಟೆಯೊಳಗೆ ದೊಡ್ಡ ಕ್ರಾಂತಿಯ ಸಿಗ್ನಲ್ ಬಂದಿದೆ. ಸಿದ್ದರಾಮಯ್ಯ ಸಂಪುಟ ಸರ್ಜರಿಗೆ ಸೀಕ್ರೆಟ್ ಆಗಿ ತಯಾರಿ ಆರಂಭಿಸಿದ್ದಾರೆ. ಮಂತ್ರಿಗಳಾಗಿ ಏನ್ ಮಾಡಿದ್ದೀರಿ ಅನ್ನೋದ್ರ ರಿಪೋರ್ಟ್​ ಕೊಡಿ ಎಂದಿದೆ ಹೈಕಮಾಂಡ್​. ಇದರಿಂದ ಸಚಿವರುಗಳಿಗೆ ಟೆನ್ಷನ್​ ಶುರುವಾಗಿದೆ​. ಜೊತೆಗೆ ಶಾಸಕರ ಎದೆಯಲ್ಲಿ ಮಿನಿಸ್ಟರ್​​ ಆಗೋ ಆಸೆ ಚಿಗುರೊಡೆದು ಹೆಮ್ಮರವಾಗುತ್ತಿದೆ. ಹೀಗಾಗಿ ಹಲವು ಹಿರಿಯ ಮತ್ತು ಕಿರಿಯ ಶಾಸಕರು ಮಂತ್ರಿಗಿರಿಗೆ ಪಟ್ಟು ಹಿಡಿದಿದ್ದಾರೆ. ಆದರೆ, ಅಲ್ಲಿರೋದು ಕೆಲವೇ ಕೆಲವು ಸೀಟು. ಆದ್ದರಿಂದ ಕೈ ನಾಯಕರು ಹೊಸ ಮಿನಿಸ್ಟರ್ಸ್​ ಆಯ್ಕೆಗೆ ತ್ರಿ ಸೂತ್ರವನ್ನು ಸಿದ್ಧಪಡಿಸಿದ್ದಾರೆ. ಹಾಲಿ ಸಚಿವರ ಮೇಲೆ ತೂಗುಗತ್ತಿಯಂತೆ ತೂಗ್ತಿವೆ ಪಂಚ ಪ್ರಶ್ನೆಗಳು. ಪಕ್ಷದೊಳಗೇನೆ ಹೊಸ ಆಟ ಆರಂಭಿಸಿದ್ಯಾ ಕಾಂಗ್ರೆಸ್ ಹೈಕಮಾಂಡ್..? ಆಸೆಯೇ ಇಲ್ಲಿ ಅಸ್ತ್ರವಾಗಿದ್ಯಾ..? ಕೈ ಸಾಮ್ರಾಜ್ಯದಲ್ಲಿ ನಡೆಯುತ್ತಿರೋ ರಣರೋಚಕ ರಾಜಕೀಯ ಸ್ಟೋರಿಯನ್ನ ತೋರಿಸ್ತೀವಿ ನೋಡಿ. 

ಹಾಗಿದ್ರೆ ಏನಿರಬಹುದು ಆ ಹೊಸ ರಾಜಕೀಯ ಆಟ.. ಸಚಿವ ಸಂಪುಟ ಪುನರ್​ರಚನೆ ಅನ್ನೋ ವಿಚಾರ ಇಡ್ಕೊಂಡು ಕಾಂಗ್ರೆಸ್​ ಹೈಕಮಾಂಡ್​ ತನ್ನ ಪಕ್ಷದೊಳಗೇನೆ ಆ ಆಟ ಆರಂಭಿಸಿದ್ಯಾ.?  ರಾಜ್ಯದಲ್ಲಿ ಸದ್ಯದಲ್ಲಿಯೇ ಸಂಪುಟ ಪುನರ್​ರಚನೆ ಆಗುತ್ತೆ.. ಹೀಗೊಂದು ಚರ್ಚೆ ಮತ್ತೆ ಮೇಲೆದ್ದು ಕೂತಿದೆ. ಆ ಚರ್ಚೆ ಹೌದು ಅನ್ನೋದಕ್ಕೆ ಒಂದಷ್ಟು ಸೂಚನೆಗಳು ಕೂಡ ಸಿಗ್ತಿವೆ. ಆದ್ರೆ, ಇಲ್ಲಿಯೂ ಒಂದು ರಾಜಕೀಯ ಆಟ ಇರಬಹುದು. ಆ ಆಟವನ್ನ ಕಾಂಗ್ರೆಸ್ ಹೈಕಮಾಂಡ್​ ತನ್ನ ಪಕ್ಷದೊಳಗೇನೆ ಆಡ್ತಾ ಇರಬಹುದು ಎನ್ನಲಾಗ್ತಿದೆ. ಒಂದು ವೇಳೆ ಸಚಿವ ಸಂಪುಟ ಪುನರ್​​ರಚನೆ ಆಗೋದು ಖಚಿತವೇ ಆಗಿದ್ರು ಕೂಡ, ಅಲ್ಲಿ ಮತ್ತೊಂದಿಷ್ಟು ಸವಾಲುಗಳು ಸರ್ಕಾರದ ಮುಂದೆ ಬಂದು ನಿಲ್ಲುತ್ತವೆ.