ಸಿಂದಗಿ, ಹಾನಗಲ್ ಬೈ ಎಲೆಕ್ಷನ್: ಅಲ್ಪಸಂಖ್ಯಾತರಿಗೆ ಜೆಡಿಎಸ್ ಮಣೆ, ಲೆಕ್ಕಾಚಾರ ವರ್ಕೌಟ್ ಆಗುತ್ತಾ.?
ಹಾನಗಲ್‌ನಿಂದ ನಿಯಾಜ್ ಶೇಖ್, ಸಿಂದಗಿಯಿಂದ ನಾಜಿಯಾ ಶಕೀಲ್‌ರನ್ನು ಜೆಡಿಎಸ್ ಕಣಕ್ಕಿಳಿಸಲಿದೆ. ಈ ಮೂಲಕ ಜೆಡಿಎಸ್ ಅಲ್ಪಸಂಖ್ಯಾತರನ್ನು ಕಡೆಗಣಿಸುವುದಿಲ್ಲ ಎಂಬ ಸಂದೇಶ ನೀಡಿದೆ.
ಬೆಂಗಳೂರು (ಅ. 06): ಹಾನಗಲ್‌ನಿಂದ ನಿಯಾಜ್ ಶೇಖ್, ಸಿಂದಗಿಯಿಂದ ನಾಜಿಯಾ ಶಕೀಲ್‌ರನ್ನು ಜೆಡಿಎಸ್ ಕಣಕ್ಕಿಳಿಸಲಿದೆ. ಈ ಮೂಲಕ ಜೆಡಿಎಸ್ ಅಲ್ಪಸಂಖ್ಯಾತರನ್ನು ಕಡೆಗಣಿಸುವುದಿಲ್ಲ ಎಂಬ ಸಂದೇಶ ನೀಡಿದೆ.
ಸಿಂಧಗಿ, ಹಾನಗಲ್ 'ಕೈ' ಅಭ್ಯರ್ಥಿ ಘೋಷಣೆ: ಪ್ಲಸ್, ಮೈನಸ್ ಲೆಕ್ಕಾಚಾರ ಹೀಗಿದೆ.
ಇನ್ನು ಕ್ಷೇತ್ರದ ಲೆಕ್ಕಾಚಾರ ನೋಡುವುದಾದರೆ, ನಿಯಾಜ್ ಶೇಖ್ ಯುವರಾಜಕಾರಣಿ. ಯುವಸಮೂಹವನ್ನು ಸೆಳೆಯಬಹುದು. ಕ್ಷೇತ್ರದಲ್ಲೂ 35 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತಗಳಿವೆ. ಇನ್ನು ಹಾನಗಲ್‌ನಲ್ಲಿ ಜೆಡಿಎಸ್ ಪ್ರಬಲವಾಗಿಲ್ಲ. ಕೆಲಸ ಮಾಡಲು ಕಾರ್ಯಕರ್ತರುಗಳಿಲ್ಲ. ಇನ್ನು ಸಿಂಧಗಿಯಲ್ಲಿ ನಾಜಿಯಾ ಶಕೀಲ್ ಅಲ್ಪಸಂಖ್ಯಾತರನ್ನು ಸೆಳೆಯುವ ಶಕ್ತಿಯಿದೆ.