ಚನ್ನಪಟ್ಟಣ ಗೊಂಬೆಯಾಟ: ಸೈನಿಕನ ವಿರುದ್ಧ ದಳಪತಿ ಪುತ್ರನೇ ಮೈತ್ರಿ ಅಭ್ಯರ್ಥಿಯಾಗಿದ್ದೇಕೆ?

ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು ಕುಮಾರಸ್ವಾಮಿ ಅವರ ಕಣ್ಣೀರಿನ ಕಥೆಯನ್ನು ಹೇಳಿದ್ದಾರೆ. ನಿಖಿಲ್ ಗೆಲುವಿಗೆ ಡಿಕೆ-ಯೋಗಿ ಚಕ್ರವ್ಯೂಹ ಎದುರಾಗಲಿದ್ದು, ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

First Published Oct 25, 2024, 8:24 PM IST | Last Updated Oct 25, 2024, 8:24 PM IST

ಕಾಂಗ್ರೆಸ್ ಸೇರಿ ತೊಡೆ ತಟ್ಟಿದ ಚನ್ನಪಟ್ಟಣದ ಸೈನಿಕನ  ವಿರುದ್ಧ ದೇವೇಗೌಡರ ಮೊಮ್ಮಗನೇ ಮೈತ್ರಿ ಸಿಪಾಯಿ..! ಬೊಂಬೆನಾಡಿನ ಬೊಂಬಾಟ್ ಯುದ್ಧದಲ್ಲಿ 'ಕುಮಾರಸ್ವಾಮಿ  ಪುತ್ರ'ನೇ ದೋಸ್ತಿ ಅಭ್ಯರ್ಥಿ..! ಅಳೆದೂ ತೂಗಿ ಮಗನನ್ನೇ ರಣರಂಗಕ್ಕಿಳಿಸಿದ್ದೇಕೆ ದಳಪತಿ..? ಎರಡು ಚಕ್ರವ್ಯೂಹಗಳಲ್ಲಿ ಬಂಧಿಯಾಗಿದ್ದ ನಿಖಿಲ್ ಕುಮಾರಸ್ವಾಮಿ, ಮೂರನೇ ಚಕ್ರವ್ಯೂಹವನ್ನು ಭೇದಿಸ್ತಾರಾ..? ಖೆಡ್ಡಾ ತೋಡಿ ಬೇಟೆಗೆ ಕಾಯ್ತಿರೋ ಶತ್ರುವ್ಯೂಹವನ್ನು ಛಿದ್ರಮಾಡ್ತಾರಾ ಜೆಡಿಎಸ್ ಯುವರಾಜ..? ಒಂದೇ ಕ್ಷೇತ್ರ.. ತಂದೆ-ತಾಯಿ-ಮಗನ ವಿರುದ್ಧ ಸೈನಿಕನ ಸ್ಪರ್ಧೆ..! ಮತ್ತೆ ಮಾರ್ಧನಿಸಲಿದೆ ಡಿಕೆ Vs ದಳಪತಿ ಮಹಾಯುದ್ಧ .

ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಘೋಷಣೆಯಾಗ್ತಿದ್ದಂತೆ ದಳಪತಿಯ ಕಣ್ಣೀರಿನ ಕಥೆಯೊಂದನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್. ಹೆಜ್ಜೆ ಹೆಜ್ಜೆಗೂ ಕೌತುಕದ ಕಣವಾಗಿದ್ದ ಚನ್ನಪಟ್ಟಣ ಅಖಾಡಕ್ಕೆ ಕ್ಲೈಮ್ಯಾಕ್ಸ್'ನಲ್ಲಿ ರೋಚಕ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ನಡೆಯಲಿರೋದು ಕೈ ಸೈನಿಕ Vs ದಳ ಸಿಪಾಯಿ ಕಾಳಗ.. ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಘೋಷಣೆಯಾಗ್ತಿದ್ದಂತೆ ದಳಪತಿಯ ಕಣ್ಣೀರಿನ ಕಥೆಯೊಂದನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್.

ಅಪ್ಪನ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಮಗ ನಿಖಿಲ್ ಕುಮಾರಲ್ವಾಮಿ. ಹಾಗಾದ್ರೆ ಚನ್ನಪಟ್ಟಣದ ಚಕ್ರವ್ಯೂಹ ಭೇದಿಸಲು ಹೊರಟಿರುವ ನಿಖಿಲ್'ಗೆ ಅಲ್ಲಿ ಎದುರಾಗೋ ಸವಾಲು ಎಂಥದ್ದು..? ನಿಖಿಲ್ ಸೋಲಿಗೆ ಎದ್ದು ನಿಂತಿರೋ ಡಿಕೆ-ಯೋಗಿ ಚಕ್ರವ್ಯೂಹ ಅದೆಷ್ಟು ರೋಚಕ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ. ಸೈನಿಕ Vs ಸಿಪಾಯಿ.. ಬೊಂಬೆಯಾಟದಲ್ಲಿ ಗೆದ್ದು ಚನ್ನಪಟ್ಟಣ ಚಕ್ರವರ್ತಿ ಪಟ್ಟವೇರೋದು ಯಾರು..? Jusy wait and watch.. ಯಾಕಂದ್ರೆ, ಅಸಲಿ ಆಟ ಈಗಷ್ಟೇ ಶುರುವಾಗಿದೆ.