ಕಾವೇರಿ ನೀರು ಬರಿದಾದ ಮೇಲೆ ತುರ್ತು ಸಭೆ ಕರೆದ ಸಿದ್ದರಾಮಯ್ಯ!
ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿ,ನಾಳೆ ಕರ್ನಾಟಕ ಬಂದ್, ರ್ಯಾಲಿ ತಡೆದರೆ ಉಗ್ರ ಹೋರಾಟದ ಎಚ್ಚರಿಕೆ, ತಮಿಳು ನಟ ಸಿದ್ದಾರ್ಥ್ ಚುನಾವಣಾ ಪ್ರಚಾರದ ವಿರುದ್ಧ ಕನ್ನಡ ಸಂಘಟನೆ ಆಕ್ರೋಶ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೇಲಿಂದ ಮೇಲೆ ಕರ್ನಾಟಕ್ಕಕೆ ಅನ್ಯಾಯವಾಗಿದೆ. ಕಾವೇರಿ ನದಿ ನೀರು ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಕವಾಗಿ ವಾದ ಮಂಡಿಸದೆ, ದಾಖಲೆಗಳನ್ನು ನೀಡದ ಕರ್ನಾಟಕ ಇದೀಗ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದರೂ ಮೊದಲ ಆದೇಶದಂತೆ 10 ಸಾವಿರ ಕ್ಯೂಸೆಕ್, ಬಳಿಕ 5 ಸಾವಿರ ಕ್ಯೂಸೆಕ್ ಹಾಗೂ ಇದೀಗ 3 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಾಳಿನ ಕರ್ನಾಟಕ ಬಂದ್ ಪ್ರತಿಭಟನೆ ಕಾವು ಜೋರಾಗುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇದೀಗ ಸಭೆ ಕರೆದಿದ್ದಾರೆ. ನಾಳೆ ಕಾವೇರಿ ವಿಚಾರ ಚರ್ಚಿಸಲು ತಜ್ಞರು, ವಕೀಲರು, ಜಲಸಂಪನ್ಮೂಲ ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ.