Karnataka Bandh: ಡಿ. 31 ಕ್ಕೆ ಬಂದ್ ಯಶಸ್ವಿ ಎಂದ ವಾಟಾಳ್, ಸಮಸ್ಯೆಗೆ ಬಂದ್ ಪರಿಹಾರನಾ? ಸುಮಲತಾ
ಎಂಇಎಸ್ ಪುಂಡಾಟ (MES) ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ, ಎಂಇಎಸ್‌ನ್ನು ನಿಷೇಧಿಸಬೇಕೆಂದು ಆಗ್ರಹಿಸಿ, ಡಿ. 31 ಕ್ಕೆ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ.
ಬೆಂಗಳೂರು (ಡಿ. 28): ಎಂಇಎಸ್ ಪುಂಡಾಟ (MES) ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ, ಎಂಇಎಸ್‌ನ್ನು ನಿಷೇಧಿಸಬೇಕೆಂದು ಆಗ್ರಹಿಸಿ, ಡಿ. 31 ಕ್ಕೆ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಈ ಬಂದ್‌ಗೆ 1800 ಸಂಘಟನೆಗಳು ಬೆಂಬಲ ನೀಡಿವೆ. ಇದು ಪ್ರತಿಷ್ಠೆಯ ಹೋರಾಟವಲ್ಲ, ಕನ್ನಡಿಗರಿಗಾಗಿ ಮಾಡುತ್ತಿರುವ ಬಂದ್ ಎಂದು ವಾಟಾಳ್ ನಾಗರಾಜ್ ಹೇಳಿದರು.
News Hour ಡಿ. 28 ರಿಂದ 10 ದಿನ ನೈಟ್ ಕರ್ಫ್ಯೂ, ಡಿ. 31 ಕ್ಕೆ ಬಂದ್: ಸಮಸ್ಯೆಗಳ ಆಗರವಾದ ಕರ್ನಾಟಕ
ಕರ್ನಾಟಕ ಬಂದ್‌ನಿಂದ ಯಾರಿಗೇನು ಉಪಯೋಗ.? ಸಮಸ್ಯೆಗೆ ಬಂದ್‌ನಿಂದ ಉತ್ತರ ಸಿಗುವುದಾದರೆ ಬಂದ್ ಮಾಡಿ, ಇದರಿಂದ ಚಿತ್ರೋದ್ಯಮ ಮಾತ್ರವಲ್ಲ, ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ನಾಡದ್ರೋಹಿ ಎಂಇಎಸ್ ನಿಷೇಧಕ್ಕೆ ಹೆಚ್ಚಿದ ಒತ್ತಡ, ತುಮಕೂರಿನಲ್ಲಿ ಜಯಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.