Asianet Suvarna News Asianet Suvarna News

ಸೆ. 25 ಕ್ಕೆ ಕರ್ನಾಟಕ ಬಂದ್? ಹೊರ ಹೋಗುವ ಮುನ್ನ ಇರಲಿ ಎಚ್ಚರ..ಎಚ್ಚರ!

ಇದೇ ಶುಕ್ರವಾರ ಅಂದರೆ ಸೆ. 25 ಕ್ಕೆ ಕರ್ನಾಟಕ ಬಂದ್ ಸಾಧ್ಯತೆ ಇದೆ. ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಲು ಮುಂದಾಗಿವೆ. ಇಂದು ಸಂಜೆಯೊಳಗೆ ಅಧಿಕೃತವಾಗಲಿದೆ. 

ಬೆಂಗಳೂರು (ಸೆ. 22): ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘ, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಈ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. 

ರೈತ ಸಂಘಟನೆಗಳ ನಿರ್ಧಾರಕ್ಕೆ ನಾವು ಬದ್ಧ; ಕರ್ನಾಟಕ ಬಂದ್‌ಗೆ ಕರವೇ ಸಾಥ್

ಇದೀಗ ಪ್ರತಿಭಟನೆ ಬಂದ್ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದೇ ಶುಕ್ರವಾರ ಅಂದರೆ ಸೆ. 25 ಕ್ಕೆ ಕರ್ನಾಟಕ ಬಂದ್ ಸಾಧ್ಯತೆ ಇದೆ. ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಲು ಮುಂದಾಗಿವೆ. ಇದರ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಹೊರ ಬರಬೇಕಿದೆ.  ಎಂಪಿಎಂಸಿ ಕಾಯ್ದೆ ಬಗ್ಗೆ, ಬಂದ್ ಬಗ್ಗೆ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಂಜುಳಾ ಪೂಜಾರಿ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಏನ್ ಹೇಳ್ತಾರೆ ಕೇಳೋಣ ಬನ್ನಿ..!