' ಎಪಿಎಂಸಿಯಲ್ಲೂ ಲೋಪಗಳಿವೆ, ರೈತರ ಉತ್ಪನ್ನ ಮರು ಹರಾಜಾಗಿರುವ ಇತಿಹಾಸವೇ ಇಲ್ಲ'
ಕರ್ನಾಟಕ ಬಂದ್‌ಗೆ , ರೈತರ ಹೋರಾಟಕ್ಕೆ ಯುವ ಕೃಷಿಕ, ಬಿಗ್ ಬಾಸ್ ವಿನ್ನರ್ ಶಶಿ ಸಾಥ್ ನೀಡಿದ್ದಾರೆ. ಪ್ರತಿಭಟನೆ ವೇಳೆ, ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಬಹಳ ಸಮಸ್ಯೆಯಾಗುತ್ತದೆ' ಎಂದರು.
ಬೆಂಗಳೂರು (ಸೆ. 28): ಕರ್ನಾಟಕ ಬಂದ್‌ಗೆ , ರೈತರ ಹೋರಾಟಕ್ಕೆ ಯುವ ಕೃಷಿಕ, ಬಿಗ್ ಬಾಸ್ ವಿನ್ನರ್ ಶಶಿ ಸಾಥ್ ನೀಡಿದ್ದಾರೆ. ಪ್ರತಿಭಟನೆ ವೇಳೆ, ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಬಹಳ ಸಮಸ್ಯೆಯಾಗುತ್ತದೆ. ಈಗ ಜಾರಿಯಲ್ಲಿರುವ ಎಪಿಎಂಸಿ ಕಾಯ್ದೆಯಲ್ಲಿಯೂ ಸಾಕಷ್ಟು ಲೋಪದೋಷಗಳಿವೆ. ಅದೇ ರೀತಿ ಈಗ ತರಲು ಹೊರಟಿರುವ ಕಾಯ್ದೆಯಲ್ಲಿಯೂ ಸಾಕಷ್ಟು ಲೋಪದೋಷಗಳಿವೆ. ಭಾರತದಲ್ಲಿ 7200 ಎಪಿಎಂಸಿಗಳಿವೆ. ಇದುವರೆಗೂ ರೈತರ ಬೆಳೆಗಳನ್ನು ಮರು ಹರಾಜು ಮಾಡಿರುವ ಇತಿಹಾಸವೇ ಇಲ್ಲ' ಎಂದು ಅಂಕಿ ಅಂಶ ಸಮೇತ ವಿವರಣೆ ನೀಡಿದ್ದಾರೆ.
'ಮೋದಿಯವರೇ, ಸಿಎಂ ಸಾಹೇಬ್ರೇ ಮತ್ತೊಮ್ಮೆ ಪರಿಶೀಲಿಸಿ, ಇಲ್ದಿದ್ರೆ ಸಂಘರ್ಷ ಎದುರಿಸಿ'