'ಮೋದಿಯವರೇ, ಸಿಎಂ ಸಾಹೇಬ್ರೇ ಮತ್ತೊಮ್ಮೆ ಪರಿಶೀಲಿಸಿ, ಇಲ್ದಿದ್ರೆ ರೈತ ಸಂಘರ್ಷ ಎದುರಿಸಿ'

ರೈತರ ಹೋರಾಟ ಲೆಕ್ಕಿಸದೇ ಕೃಷಿ ಮಸೂದೆ, ಭೂ ಸುಧಾರಣೆ ಮಸೂದೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಖಂಡಿಸಿ ಇಂದು ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

First Published Sep 28, 2020, 12:21 PM IST | Last Updated Sep 28, 2020, 12:24 PM IST

ಬೆಂಗಳೂರು (ಸೆ. 28): ರೈತರ ಹೋರಾಟ ಲೆಕ್ಕಿಸದೇ ಕೃಷಿ ಮಸೂದೆ, ಭೂ ಸುಧಾರಣೆ ಮಸೂದೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಖಂಡಿಸಿ ಇಂದು ರೈತ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಯತ್ನ; ನಾರಾಯಣ ಗೌಡ್ರು ಸೇರಿದಂತೆ ಕರವೇ ಕಾರ್ಯಕರ್ತರು ವಶಕ್ಕೆ

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಸರ್ಕಾರ ತರಲು ಹೊರಟಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಇವೆಲ್ಲವೂ ಗ್ರಾಮೀಣ ಭಾರತದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಕೊರೊನಾ ನಂತರ ಹಳ್ಳಿಗಳು ಖಾಲಿಯಿಲ್ಲ. ಹಳ್ಳಿಗಳು ಭರ್ತಿಯಾಗಿವೆ. ಸಾಕಷ್ಟು ಯುವಕರು ಕೃಷಿಯತ್ತ ಬರುತ್ತಿದ್ದಾರೆ. ಹಾಗಾಗಿ ಭೂಸುಧಾರಣಾ ಕಾಯ್ದೆ, ಕೃಷಿ ಕಾಯ್ದೆ ತರುವ ಮುನ್ನ ಪ್ರಧಾನಿಯವರು, ಸಿಎಂ ಸಾಹೇಬ್ರು ಇನ್ನೊಮ್ಮೆ ಪರಿಶೀಲಿಸಬೇಕು. ಈ ಸಂಘರ್ಷವನ್ನು ಎದುರಿಸಲು ಹಳ್ಳಿ ಜನ ಸಿದ್ಧರಾಗುತ್ತಾರೆ. ಈ ಬಂದ್‌ ಮೂಲಕ ನಮ್ಮೆಲ್ಲರ ಅವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದೇವೆ' ಎಂದು ಚಂದ್ರಶೇಖರ್ ಹೇಳಿದರು.