Karnataka Bandh: ಕರ್ನಾಟಕ ಬಂದ್‌ಗೆ ಯಶ್ ಸಪೋರ್ಟ್ ಮಾಡ್ತಾರಾ.?

ಮಹಾಷ್ಟ್ರದಲ್ಲಿ (maharashtra) ಕರ್ನಾಟಕ ಧ್ವಜ ಸುಟ್ಟಘಟನೆ ಹಾಗೂ ಬೆಳಗಾವಿಯಲ್ಲಿ (Belagavi) ಎಂಇಎಸ್‌ನ (MES) ಪುಂಡಾಟಿಕೆಯನ್ನು ವಿರೋಧಿಸಿ ಡಿ.31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ವ್ಯಕ್ತಪಡಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 25): ಮಹಾಷ್ಟ್ರದಲ್ಲಿ (maharashtra) ಕರ್ನಾಟಕ ಧ್ವಜ ಸುಟ್ಟಘಟನೆ ಹಾಗೂ ಬೆಳಗಾವಿಯಲ್ಲಿ (Belagavi) ಎಂಇಎಸ್‌ನ (MES) ಪುಂಡಾಟಿಕೆಯನ್ನು ವಿರೋಧಿಸಿ ಡಿ.31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ನೈತಿಕ ಬೆಂಬಲ ವ್ಯಕ್ತಪಡಿಸಿದೆ.

Karnataka Bandh: ನಾವು ಯಾವತ್ತೂ ಕನ್ನಡ ಭಾಷೆ ಪರವಾಗಿ ಇರುತ್ತೇವೆ: ಶಿವರಾಜ್‌ಕುಮಾರ್

'ಬಂದ್‌ ಮಾಡಿದ್ರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ರೀತಿ ಘಟನೆಗಳು ನಡೆದಾಗ ಕನ್ನಡಿಗರಾಗಿ ನಾವೆಲ್ಲಾ ಒಟ್ಟಾಗಿ ಹೋರಾಡಬೇಕು. ನಾವು ಪರಭಾಷೆಯವರಿಗೆ ನೋವುಂಟು ಮಾಡಿದರೆ, ನಮ್ಮ ಭಾಷೆಗೂ ಅವಮಾನ ಮಾಡಿದಂತೆ. ನಮ್ಮ ನಮ್ಮ ಕೆಲಸಗಳಲ್ಲಿ ನಮ್ಮ ನಾಡು ನುಡಿ ಭಾಷೆಗೆ ಗೌರವ ಕೊಡುವ ಕೆಲಸ ಮಾಡುತ್ತೇವೆ. ಆದರೆ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ದೊಡ್ಡವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ' ಎಂದು ಯಶ್ ಹೇಳಿದರು. 

Related Video