Karnataka Bandh: ನೈತಿಕ ಬೆಂಬಲ ಎಂದ ಸಿದ್ದು, ಬಂದ್ ಬೇಕೇನ್ರಿ ಎಂದ ಡಿಕೆಶಿ, ಮೂಡದ ಒಮ್ಮತ

 ಎಂಇಎಸ್ ಪುಂಡಾಟಿಕೆ (MES) ರಾಯಣ್ಣ ಪ್ರತಿಮೆ ಧ್ವಂಸ ವಿಚಾರ ಖಂಡಿಸಿ, ಡಿ. 31 ಕ್ಕೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. 

First Published Dec 27, 2021, 9:43 AM IST | Last Updated Dec 27, 2021, 9:43 AM IST

ಬೆಂಗಳೂರು (ಡಿ. 27): ಎಂಇಎಸ್ ಪುಂಡಾಟಿಕೆ (MES) ರಾಯಣ್ಣ ಪ್ರತಿಮೆ ಧ್ವಂಸ ವಿಚಾರ ಖಂಡಿಸಿ, ಡಿ. 31 ಕ್ಕೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. ಈ ಬಂದ್‌ ಬಗ್ಗೆ ಕನ್ನಡ ಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. 

'ಕರ್ನಾಟಕ ಬಂದ್‌ಗೆ ನಮ್ಮ ನೈತಿಕ ಬೆಂಬಲವಿದೆ. ಎಂಇಎಸ್‌ ಪುಂಡರನ್ನು ಖಂಡಿಸಿದ್ರೆ ಆಗಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು. ಈ ಬಗ್ಗೆ ಮೋದಿಯವರಿಗೆ ಮನವರಿಕೆ ಮಾಡಿಕೊಡಬೇಕು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

'ಈಗಾಗಲೇ ಕೊರೋನಾದಿಂದ ಜನ ಸಂಕಷ್ಟದಲ್ಲಿದ್ಧಾರೆ. ಇಂತಹ ಸಂದರ್ಭದಲ್ಲಿ ಬಂದ್ ಬೇಕೇನ್ರಿ..? ಈ ಬಗ್ಗೆ ನಾನೇನು ಹೇಳಲ್ಲ. ಸರ್ಕಾರವೇ ಉತ್ತರ ಕೊಡುತ್ತದೆ' ಎಂದು ಡಿಕೆ ಶಿವಕುಮಾರ್ ಹೇಳಿದ್ಧಾರೆ.