Asianet Suvarna News Asianet Suvarna News

ಇಲ್ಲಿಗೆ ಬಂದ್ರೆ ಸುಮ್ನೆ ಬಿಡಲ್ಲ! ನಟ ಮಯೂರ್‌ ಪಟೇಲ್‌ಗೆ ಜೀವ ಬೆದರಿಕೆ!

ಸೈಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ  ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್‌ಗೆ ಅಪರಿಚಿತರಿಂದ  ಜೀವ ಬೆದರಿಕೆ ಬಂದಿದೆ. 
 

ಬೆಂಗಳೂರು (ಫೆ. 13): ಸೈಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ  ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್‌ಗೆ ಅಪರಿಚಿತರಿಂದ  ಜೀವ ಬೆದರಿಕೆ ಬಂದಿದೆ. 

ಎಂ.ಎಸ್ ಸುಬ್ರಹ್ಮಣ್ಯಂ ಎಂಬುವವರಿಂದ ಬೇಗೂರ್ ಬಳಿಯ ಪರಂಗಿಪಾಳ್ಯದ ಬಿಬಿಎಂಪಿ ಖಾತೆ ನಂ. 275/16/18 ರ ಸೈಟ್ ನಂ. 18 ರನ್ನು ಖರೀದಿಸಲು ಮುಂದಾಗಿದ್ರು ಮಯೂರ್.  ಕಳೆದ ಜನವರಿ 22 ರಂದು ಗೆಳೆಯನೊಂದಿಗೆ ಸೈಟ್ ನೋಡಲು ಪರಂಗಿಪಾಳ್ಯಕ್ಕೆ ತೆರಳಿದಾಗ ಕರಾರು ಮಾಡಿಕೊಂಡಿದ್ದ ಸೈಟ್ ಗೆ ಕಂಪೌಂಡ್ ಹಾಕಿದ್ದರು ಅಪರಿಚಿತರು.   ಈ ಸೈಟ್ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಎನ್ನುವವರಿಗೆ ಸೇರಿದ್ದು. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಅಂತ ಮಯೂರ್ ಪಟೇಲ್ ಗೆ ಅವಾಜ್ ಹಾಕಿದ್ದಾರೆ. 

ಮುದ್ದು ಮಗಳೇ ಶತ್ರುವಾದಳು, ತಂದೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಸತ್ಯಜಿತ್ ಮಗಳು

ನಕಲಿ ದಾಖಲಾತಿಗಳನ್ನ ಸೃಷ್ಟಿಸಿಕೊಂಡು ಅನಂತರಾಮರೆಡ್ಡಿ ನಿಜ ದಾಖಲಾತಿ ಅಂತ ಬೆದರಿಕೆ ಹಾಕ್ತಿದ್ದಾರೆ. ಅನಂತರಾಮರೆಡ್ಡಿ, ಮಂಜುನಾಥ್ ರೆಡ್ಡಿ  ವಿರುದ್ದ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರಿಗೆ  ದೂರು ನೀಡಿದ್ದಾರೆ.