ಮುದ್ದು ಮಗಳೇ ಶತ್ರುವಾದಳು, ತಂದೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಸತ್ಯಜಿತ್ ಮಗಳು

ಹಿರಿಯ ನಟ ಸತ್ಯಜಿತ್ ವಿರುದ್ಧ ಮಗಳು  ಅಖ್ತರ್ ಸ್ವಲೇಹಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮ್ಮ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಮನೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 12): ಹಿರಿಯ ನಟ ಸತ್ಯಜಿತ್ ವಿರುದ್ಧ ಮಗಳು ಅಖ್ತರ್ ಸ್ವಲೇಹಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮ್ಮ ತಂದೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಮನೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿಸುತ್ತಿದ್ದಾರೆ. ನಾವು ತಿಂಗಳಿಗೆ 1 ಲಕ್ಷ ರೂ ಕೊಟ್ಟರೂ, ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಮಗಳು ಸ್ವಲೇಹಾ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲ್ಲಿಕಾರ್ಜುನ ಖರ್ಗೆಗೆ 'ಭರ್ಜರಿ ಗಿಫ್ಟ್': ಅಧಿಕೃತ ಆದೇಶವೊಂದೇ ಬಾಕಿ

ಸತ್ಯಜಿತ್ ಹಾಗೂ ಮಗಳು ಸ್ವಲೇಹರನ್ನು ಕರೆಸಿ ಮಾತನಾಡಿದ್ದಾರೆ. ಇನ್ನು ಮುಂದೆ ಗಲಾಟೆ ಮಾಡಿಕೊಳ್ಳಲ್ಲ ಎಂದು ಪೊಲೀಸರ ಮುಂದೆ ರಾಜಿಯಾಗಿದ್ದಾರೆ. ಸತ್ಯಜಿತ್ ಅವರು ಗ್ಯಾಂಗ್ರೀನ್‌ನಿಂದ ಕಾಲು ಕಳೆದುಕೊಂಡಿದ್ದಾರೆ. ಹಾಗಾಗಿ ಶೂಟಿಂಗ್‌ಗಳಿಗೆ ಹೋಗುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ತಂದೆ ಮಗಳ ನಡುವೆ ಮನಸ್ತಾಪ ಇದೇ ಮೊದಲೇನಲ್ಲ. ಈಗ ಈ ಮನಸ್ತಾಪ ಇನ್ನಷ್ಟು ಹೆಚ್ಚಾಗಿದೆ.ಈ ಬಗ್ಗೆ ಇನ್ನಷ್ಟು ಅಪ್‌ಡೇಟ್ಸ್ ಇಲ್ಲಿದೆ ನೋಡಿ 

Related Video