2023 ಕ್ಕೆ ಪಾಲಿಟಿಕ್ಸ್‌ಗೆ ಗುಡ್‌ ಬೈ ಹೇಳ್ತಾರಾ 'ರಾಜಾಹುಲಿ'?

ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ಬಗ್ಗೆ ಕಲ್ಲಡ್ಕ ಪ್ರಭಾಕರ್‌ ಭಟ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಶೂನ್ಯದಿಂದ ಬೆಳೆಸಿದ ನಾಯಕ ಅಂದ್ರೆ ಅದು ಬಿ ಎಸ್ ಯಡಿಯೂರಪ್ಪ. ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ಇದೀಗ ಸಿಎಂ ಆಗಿ ಅರ್ಧ ವರ್ಷವೂ ಕಳೆದಿಲ್ಲ ಆಗಲೇ ರಾಜಕೀಯ ನಿವೃತ್ತಿ ಬಗ್ಗೆ ಯಾಕೆ ಮಾತು ಬಂದಿದೆ ಎಂಬ ಪ್ರಶ್ನೆ ಸಹಜವಾದದ್ದೇ. 

First Published Jan 22, 2020, 12:37 PM IST | Last Updated Jan 22, 2020, 12:37 PM IST

ಬೆಂಗಳೂರು (ಜ. 22): ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ಬಗ್ಗೆ ಕಲ್ಲಡ್ಕ ಪ್ರಭಾಕರ್‌ ಭಟ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಶೂನ್ಯದಿಂದ ಬೆಳೆಸಿದ ನಾಯಕ ಅಂದ್ರೆ ಅದು ಬಿ ಎಸ್ ಯಡಿಯೂರಪ್ಪ. ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ಇದೀಗ ಸಿಎಂ ಆಗಿ ಅರ್ಧ ವರ್ಷವೂ ಕಳೆದಿಲ್ಲ ಆಗಲೇ ರಾಜಕೀಯ ನಿವೃತ್ತಿ ಬಗ್ಗೆ ಯಾಕೆ ಮಾತು ಬಂದಿದೆ ಎಂಬ ಪ್ರಶ್ನೆ ಸಹಜವಾದದ್ದೇ. 

ಚುನಾವಣಾ ರಾಜಕೀಯಕ್ಕೆ ಬಿಎಸ್‌ವೈ ಗುಡ್‌ಬೈ: ಗುಟ್ಟು ಬಿಚ್ಚಿಟ್ಟ ಆರೆಸ್ಸೆಸ್ ನಾಯಕ

ಕಲ್ಲಡ್ಕ ಪ್ರಭಾಕರ್ ಭಟ್‌ಗೂ ರಾಜ್ಯ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಯಡಿಯೂರಪ್ಪ ಆಪ್ತ ಬಳಗದಲ್ಲಿಯೂ ಭಟ್ಟರು ಇಲ್ಲ. ಅಂತಹದ್ರಲ್ಲಿ ಭಟ್ಟರ ಜೊತೆ ಬಿಎಸ್‌ವೈ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ರಾ? 2023 ರ ಚುನಾವಣೆ ನಂತರ ನಿವೃತ್ತಿ ತೆಗೆದುಕೊಳ್ಳುತ್ತಾರಾ? ಇಲ್ಲಿದೆ ರಾಜ್ಯ ಪಾಲಿಟಿಕ್ಸ್ ಇನ್‌ಸೈಡ್ ಸ್ಟೋರಿ..!