ಬಿಜೆಪಿ ಜೊತೆ ಮೈತ್ರಿಗೆ ಓಕೆ, ಆದ್ರೆ ಕಂಡೀಶನ್ ಹಾಕಿದ ಜೆಡಿಎಸ್..!

- ಕಲಬುರಗಿ: ಕೇವಲ 4 ಸೀಟು ಗೆದ್ರೂ ಜೆಡಿಎಸ್‌ ಪವರ್‌ಫುಲ್‌!

- ಪಾಲಿಕೆ ಅಧಿಕಾರಕ್ಕೆ ಜೆಡಿಎಸ್‌ ಕಿಂಗ್‌ಮೇಕರ್‌

- ಅಂತಿಮವಾಗಿ ಬಿಜೆಪಿ ಜೊತೆಗೆ ಮೈತ್ರಿ, ಉಪಮೇಯರ್‌ ಹುದ್ದೆಗೆ ಸಮ್ಮತಿ ಸಂಭವ

First Published Sep 9, 2021, 9:17 AM IST | Last Updated Sep 9, 2021, 10:32 AM IST

ಬೆಂಗಳೂರು (ಸೆ. 09): ಇದೀಗ ಕಲಬುರಗಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್‌ ಮೇಕರ್‌ ಆಗಿದೆ. 55 ಸ್ಥಾನಗಳ ಪಾಲಿಕೆಯಲ್ಲಿ ಕೇವಲ 4 ಸ್ಥಾನ ಗೆದ್ದಿದ್ದರೂ, ಜೆಡಿಎಸ್‌ ಬೆಂಬಲಿಸುವ ಪಕ್ಷ ಅಧಿಕಾರಕ್ಕೆ ಬರುವ ಸ್ಥಿತಿ ಎದುರಾಗಿದೆ. 

ಕಲಬುರಗಿ ಪಾಲಿಕೆಯಲ್ಲಿ ದೋಸ್ತಿಗೆ ಜೆಡಿಎಸ್‌ ರೆಡಿ ಎಂದ ಎಚ್‌ಡಿಕೆ, ಯಾರ ಜೊತೆ?

ಈ ಸನ್ನಿವೇಶದ ಲಾಭ ಪಡೆಯಲು ಮುಂದಾಗಿರುವ ಜೆಡಿಎಸ್‌, ಮೇಯರ್‌ ಪಟ್ಟತನಗೇ ಬಿಟ್ಟುಕೊಡುವಂತೆ ಮೈತ್ರಿ ಆಹ್ವಾನ ನೀಡಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬೇಡಿಕೆ ರವಾನಿಸಿದೆ. ತನ್ಮೂಲಕ ರಾಜ್ಯದಲ್ಲಿ ತಮ್ಮದು ‘ಮುಳುಗುತ್ತಿರುವ ಪಕ್ಷವಲ್ಲ. ಇನ್ನೂ ನಿರ್ಣಾಯಕ ಪಾತ್ರ ವಹಿಸಬಲ್ಲ ಸಾಮರ್ಥ್ಯ ಇರುವ ರಾಜಕೀಯ ಸಂಘಟನೆ’ ಎಂಬ ಸಂದೇಶ ರವಾನೆ ಮಾಡಿದೆ. ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್‌ ಪಟ್ಟಿಗೆ ಮಣಿಯುವ ಸಾಧ್ಯತೆಯೇ ಇಲ್ಲ ಎಂಬ ನಿಲವಿಗೆ ಬಂದಿರುವ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಬೇರೆ ರಣತಂತ್ರ ಹೆಣೆಯುತ್ತಿದೆ.

 

Video Top Stories