Controversy: 'ದಲಿತ ಕಾಲೋನಿಯಲ್ಲಿ ಪಾನಕ, ಮಜ್ಜಿಗೆ ಕುಡಿಯದವರು, ಪಾದಯಾತ್ರೆ ಮಾಡೋದು ಬೂಟಾಟಿಕೆ'
ಪೇಜಾವರ ಶ್ರೀಗಳ (Pejawar Seer) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವಿಚಾರಣೆ ಎದುರಿಸಿದ ಹಂಸಲೇಖ ಅವರ ಪರ ಜ್ಞಾನಪ್ರಕಾಶ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು (ನ.27): ಪೇಜಾವರ ಶ್ರೀಗಳ (Pejawar Seer) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವಿಚಾರಣೆ ಎದುರಿಸಿದ ಹಂಸಲೇಖ (Hamsalekha) ಅವರ ಪರ ಜ್ಞಾನಪ್ರಕಾಶ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.
'ದನದ ಮಾಂಸ ತಿನ್ನದ ಬ್ರಾಹ್ಮಣ ಯಾರೂ ಇರಲಿಲ್ಲ ಎಂದು ವಿವೇಕಾನಂದರು ಹೇಳಿದ್ದರು. ಅವರ ಮೇಲೆಯೂ ಕೇಸ್ ಹಾಕ್ತೀರಾ.? ನನಗೆ ಪೇಜಾವರ ಶ್ರೀಗಳು ತುಂಬಾ ಆತ್ಮೀಯರಾಗಿದ್ದರು. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಎಂದರೆ ನಿರಾಕರಿಸಿದ್ದರು. ದಲಿತರ ಕಾಲೋನಿಯಲ್ಲಿ ಪಾನಕ, ಮಜ್ಜಿಗೆ ತೆಗೆದುಕೊಳ್ಳಿ ಎಂದರೆ ಬೇಡ ಎಂದಿದ್ದರು. ಒಂದು ಲೋಟ ಪಾನಕ, ಮಜ್ಜಿಗೆ ಕುಡಿಯದವರು, ದಲಿತ ಕೇರಿಗೆ ಪಾದಯಾತ್ರೆ ಮಾಡೋದು ಬೂಟಾಟಿಕೆ ಅಲ್ಲವೇ.? ಹಂಸಲೇಖರ ಮಾತಿನಲ್ಲಿ ತಪ್ಪೇನಿದೆ.? ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.