ಒಗ್ಗಟ್ಟಿನ ಸಂದೇಶ ಸಾರಲು ಹೊರಟ ಜೆಡಿಎಸ್‌ಗೆ ಜಿಟಿಡಿಯದ್ದೇ ತಲೆನೋವು!

ಬಿಜೆಪಿಯಲ್ಲಿ ಎರೆಡೆರಡು ಬಣದ ತಿಕ್ಕಾಟ, ಕಂಗಾಲಾದ ಕಾರ್ಯಕರ್ತರು,ಸಚಿವ ಸಂಪುಟ ಪುನಾರಚನೆ ಕಸರತ್ತು, ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ, ಸಂವಿಧಾನ ಕೆಟ್ಟವರ ಕೈಯಲ್ಲಿದ್ದರೆ ಕೆಟ್ಟದಾಗುತ್ತದೆ, ಸಿದ್ದರಾಮಯ್ಯ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಟಾಸ್ಕ್ ನೀಡಿದರೆ ಜೆಡಿಎಸ್ ಶಾಸಕರನ್ನು ಒಂದೇ ತಿಂಗಳಲ್ಲಿ ಕಾಂಗ್ರೆಸ್ ಕರೆತರುತ್ತೇನೆ ಎಂದು ಸಿಪಿ ಯೋಗೇಶ್ವರ್ ನೀಡಿದ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ಯೋಗೇಶ್ವರ್ ಮಾತಿಗೆ ಜೆಡಿಎಸ್ ಶಾಸಕರು ತಿರುಗೇಟು ನೀಡಿದ್ದಾರೆ. ಇದೀಗ ಜೆಡಿಎಸ್ ಒಗ್ಗಟ್ಟಿನ ಸಂದೇಶ ಸಾರಲು ಮುಂದಾಗಿದೆ. ನಾಳೆ ಎಲ್ಲಾ ಜೆಡಿಎಸ್ ಶಾಸಕರ ಒಗ್ಗೂಡಿಸಿ ಸುದ್ದಿಗೋಷ್ಠಿ ನಡೆಸಲು ಮುಂದಾಗಿದೆ. ಆದರೆ ಈ ಸುದ್ದಿಗೋಷ್ಠಿಗೆ ಜಿಟಿ ದೇವೇಗೌಡರು ಆಗಮಿಸುವುದು ಅನುಮಾನ ಮೂಡಿಸಿದೆ. ಈಗಾಗಲೇ ಜಿಡಿ ದೇವೇಗೌಡರು ಕಾಂಗ್ರೆಸ್ ನಾಯಕರ ಜೊತೆ ಆಪ್ತವಾಗಿದ್ದು, ಜೆಡಿಎಸ್ ಸಭೆ, ಪ್ರಚಾರಗಳಿಂದ ದೂರ ಉಳಿದಿದ್ದಾರೆ. ಇದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Related Video