Asianet Suvarna News Asianet Suvarna News

ಬೈಎಲೆಕ್ಷನ್ ದಿನಾಂಕ ನಿಗದಿ: ಹಾನಗಲ್ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಘೋಷಣೆ

Sep 28, 2021, 2:04 PM IST

ಬೆಳಗಾವಿ (ಸೆ. 28): ಸಿಂಧಗಿ ಹಾಗೂ ಹಾನಗಲ್‌ಗೆ ಅಕ್ಟೋಬರ್ 30 ಕ್ಕೆ ಉಪಚುನಾವಣೆ ನಡೆಯಲಿದೆ. ನವೆಂಬರ್ 2 ಕ್ಕೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಸಿಎಂ ಉದಾಸಿಯವರ ನಿಧನದಿಂದ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಮನಗೂಳಿಯವರ ನಿಧನದಿಂದ ಸಿಂಧಗಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.

ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣಾ ದಿನಾಂಕ ಘೋಷಣೆ  

ಹಾನಗಲ್ ಕ್ಷೇತ್ರದಿಂದ ಜೆಡಿಎಸ ಅಭ್ಯರ್ಥಿಯಾಗಿ ನಯಾಜದ್ ಶೇಖ್ ಕಣಕ್ಕಿಳಿಯಲಿದ್ದಾರೆ ಎಂದು ಎಚ್‌ಡಿಕೆ ಘೋಷಿಸಿದ್ದಾರೆ. ಸಿಂಧಗಿಯಲ್ಲಿ 5 ಮಂದಿ ಆಕಾಂಕ್ಷಿಗಳಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ ಎಚ್‌ಡಿಕೆ.