ಜಯಕರ್ನಾಟಕ ಸಂಘಟನೆಯಿಂದ ಅಭಿನಂದನಾ ಕಾರ್ಯಕ್ರಮ: ಸುವರ್ಣ ನ್ಯೂಸ್‌ ನಿರೂಪಕಿ ಭಾವನಾಗೆ ಸನ್ಮಾನ

*  ಮಹಾಶಿವರಾತ್ರಿ ಪ್ರಯುಕ್ತ ಜಯಕರ್ನಾಟಕ ಸಂಘಟನೆಯ ವತಿಯಿಂದ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ 
*  ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಗಣ್ಯರಿಗೆ ಗೌರವ ಸಮರ್ಪಣೆ 
*  ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ನಿರೂಪಕಿ ಭಾವನಾ ನಾಗಯ್ಯಗೆ ಸನ್ಮಾನ
 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.03): ಮಹಾಶಿವರಾತ್ರಿ ಪ್ರಯುಕ್ತ ಜಯಕರ್ನಾಟಕ ಸಂಘಟನೆಯ ವತಿಯಿಂದ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿಸಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಗಣ್ಯರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ನಿರೂಪಕಿ ಭಾವನಾ ನಾಗಯ್ಯ ಅವರನ್ನ ಸನ್ಮಾನಿಸಲಾಗಿದೆ. ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾವನಾ, ನೆಲ, ಜಲ, ಭಾಷೆಯ ವಿಚಾರವಾಗಿ ಸದಾಕಾಲ ಹೋರಾಟ ನಡೆಸುವ ಕನ್ನಡ ಕಟ್ಟಾಳುಗಳೇ ನಮ್ಮ ಮಣ್ಣಿನ ಹೆಮ್ಮೆ. ಕನ್ನಡ ಕಟ್ಟಾಳುಗಳಾಗಿ ಜಯಕರ್ನಾಟಕ ಸಂಘಟನೆ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದೆ ಅಂತ ಹೇಳಿದ್ದಾರೆ. 

Mekedatu Padayatra: ಜೀವಂತ ಇದ್ದೇವೆಂದು ತೋರಿಸಲು ಕಾಂಗ್ರೆಸ್‌ ಪಾದಯಾತ್ರೆ: ಸವದಿ ಕಿಡಿ

Related Video