Assembly Election 2023: ಯಡಿಯೂರಪ್ಪನವರೇ ನೀವು ಮತ್ತೆ ಸಿಎಂ ಆಗಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪ ಮಾತಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಯಡಿಯೂರಪ್ಪನವರೇ ನೀವು ಮತ್ತೆ ಸಿಎಂ ಆಗಲ್ಲ. ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡಿದ್ದಾರೆ. ನೀವು ರಾಜೀನಾಮೆ ಕೊಡುವಾಗ ಕಣ್ಣೀರು ಹಾಕಿದ್ದೀರಿ, ನೆನಪಿದೆಯಾ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

First Published Mar 11, 2022, 5:19 PM IST | Last Updated Mar 11, 2022, 5:19 PM IST

ಬೆಂಗಳೂರು (ಮಾ. 11): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ನಾಯಕರು ಖುಷಿಯಲ್ಲಿದ್ದಾರೆ.  ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ಟಾಕ್ ವಾರ್ ಮುಂದುವರೆದಿದೆ. 

ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಮಾಡುತ್ತೇವೆ: ಬಿಎಸ್‌ ಯಡಿಯೂರಪ್ಪ

ಕಾಂಗ್ರೆಸ್ ಮುಕ್ತ ಎನ್ನುವುದಕ್ಕೆ ಪಂಚರಾಜ್ಯ ಚುನಾವಣೆ ಉದಾಹರಣೆ. ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಮೋದಿ ಜೊತೆ ಜನ ಇದ್ದಾರೆಂಬುದಕ್ಕೆ ಈ ಫಲಿತಾಂಶ ಸಾಕ್ಷಿ' ಎಂದು ಬಿಎಸ್‌ವೈ ವಿಪಕ್ಷಗಳ ಕಾಲೆಳೆದಿದ್ದಾರೆ. 