ಐಟಿ ದಾಳಿ: ಉಮೇಶ್‌ ಆಪ್ತ ಅರವಿಂದ್‌ ಮನೇಲಿ ಮುಂದುವರೆದ ಶೋಧ

*  15 ಮಂದಿ ಐಟಿ ಅಧಿಕಾರಿಗಳಿಂದ ದಾಳಿ 
*  ಸದ್ಯ ದುಬೈನಲ್ಲಿರುವ ಉಮೇಶ್‌ ಆಪ್ತ ಅರವಿಂದ್‌
*  ಅರವಿಂದ್‌ ಬರುವಿಕೆಗೆ ಕಾಯುತ್ತಿರುವ ಐಟಿ ಟೀಂ
 

Share this Video
  • FB
  • Linkdin
  • Whatsapp

ಬೆಂಗಳೂರು(ಅ.08): ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಉಮೇಶ್‌ ಆಪ್ತ ಅರವಿಂದ್‌ ಮನೆಯಲ್ಲಿ ಶೋಧಕಾರ್ಯ ಮುಂದುವರೆದಿದೆ. ನಿನ್ನೆ 15 ಮಂದಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ವಸಂತನಗರದ ಎಂಬೆಸಿ ಅಪಾರ್ಟ್‌ಮೆಂಟ್‌ನಲ್ಲಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಫ್ಲ್ಯಾಟ್‌ನಲ್ಲಿ ತಂದೆ-ತಾಯಿ ಮತ್ತು ಹೆಂಡತಿ ಮಕ್ಕಳ ಜೊತೆ ಅರವಿಂದ್‌ ವಾಸವಾಗಿದ್ದಾರೆ. ಉಮೇಶ್‌ ಆಪ್ತ ಅರವಿಂದ್‌ ಸದ್ಯ ದುಬೈನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ದುಬೈನಿಂದ ಅರವಿಂದ್‌ ಬರುವಿಕೆಗೆ ಐಟಿ ಟೀಂ ಕಾಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅರವಿಂದ್‌ 5 ದಿನಗಳ ಹಿಂದೆ ದುಬೈಗೆ ತೆರಳಿದ್ದರು. 

ಕರುನಾಡಿಗೆ ಕಾದಿದೆಯಾ ಕಗ್ಗತ್ತಲ ಶಾಕ್‌..?

Related Video