Asianet Suvarna News Asianet Suvarna News

KAS ಭ್ರಷ್ಟ ಅಧಿಕಾರಿ ಸುಧಾಗೆ ಮತ್ತೊಂದು ಶಾಕ್‌..!

ಕೆಎಎಸ್‌ ಅಧಿಕಾರಿ ಸುಧಾ ವಿರುದ್ಧ ಇಡಿಯಿಂದ ಸುಮೋಟೋ ಕೇಸ್‌ ದಾಖಲು| ಸುಧಾ ಅವರ ಮನೆಯಲ್ಲಿ ಎಷ್ಟು ಆಸ್ತಿ ಸಿಕ್ಕಿದೆ ತನಿಖಾ ಮಾಹಿತಿ ಕೋರಿ ಎಸಿಬಿಗೆ ಇಡಿ, ಐಟಿ ಪತ್ರ| ಕೇಸ್‌ನ ತನಿಖೆ ಮುಗಿಸಿ ಮಾಹಿತಿ ನೀಡಲು ಎಸಿಬಿ ಚಿಂತನೆ| 

Nov 29, 2020, 10:09 AM IST

ಬೆಂಗಳೂರು(ನ.29): ಕೆಎಎಸ್‌ ಭ್ರಷ್ಟ ಅಧಿಕಾರಿ ಸುಧಾಗೆ ಇದೀಗ ಇಡಿ, ಐಟಿ ಶಾಕ್‌. ಹೌದು, ಸುಧಾ ಅವರ ಮನೆಯಲ್ಲಿ ಎಷ್ಟು ಆಸ್ತಿ ಸಿಕ್ಕಿದೆ ತನಿಖಾ ಮಾಹಿತಿ ಕೋರಿ ಎಸಿಬಿಗೆ ಇಡಿ, ಐಟಿ ಪತ್ರವೊಂದನ್ನು ಬರೆದಿದೆ. ಕೇಸ್‌ನ ಐಓ ವಾಜೀರ್‌ ಆಲಿ ಖಾನ್‌ ಅವರಿಗೆ ಇಡಿ, ಐಟಿ ಪತ್ರ ಬರೆದಿದೆ. 

ಈ ಹಿಂದೆ ಪಿಎ ಗಲಾಟೆ ಎಲ್ಲಿಗೆ ಬಂತು ಗೊತ್ತಲ್ಲ: ಈಶ್ವರಪ್ಪಗೆ ಡಿಕೆಶಿ ತಿರುಗೇಟು

ಕಳೆದ ದಿನಗಳ ಹಿಂದೆ ಎಸಿಬಿಗೆ ಇಡಿ, ಐಟಿ ಪತ್ರ ಬರೆದು ಮಾಹಿತಿ ನೀಡುವಂತೆ ಕೋರಿಕೊಂಡಿದೆ. ಕೇಸ್‌ನ ತನಿಖೆ ಮುಗಿಸಿ ಮಾಹಿತಿ ನೀಡಲು ಎಸಿಬಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.